ಅಂಬಾನಿ ಪುತ್ರನ ನಿಶ್ಚಿತಾರ್ಥಕ್ಕೆ ಶುಭ ಹಾರೈಸಲು ಬಂದ ಬಾಲಿವುಡ್

ಗೋವಾದಲ್ಲಿ ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ತನ್ನ ಗೆಳತಿ ಶ್ಲೋಕಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಸಂತೋಷವನ್ನು ಹಂಚಿಕೊಳ್ಳಲು ಮುಖೇಶ್ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿ ಸೋಮವಾರ ಸಂಜೆ ಗಣ್ಯರಿಗಾಗಿ ತಮ್ಮ ' ಅಂಟಿಲಿಯಾ' ಗೃಹದಲ್ಲಿ ಭೋಜನ ಕೂಟ ಏರ್ಪಡಿಸಿದ್ದರು.
ಈ ಪಾರ್ಟಿಗೆ ಬಾಲಿವುಡ್ ಹಾಗೂ ಇನ್ನಿತರ ಸೆಲಬ್ರಿಟಿಗಳು ಆಗಮಿಸಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿಗಳಿಗೆ ಶುಭ ಹಾರೈಸಿದರು. ಪಾರ್ಟಿಗೆ ಶಾರುಖ್ ಖಾನ್ ಹಾಗೂ ಕತ್ರೀನಾ ಮೊದಲು ಆಗಮಿಸಿ ಜೋಡಿಗಳಿಗೆ ಶುಭ ಕೋರಿದರು. ಚಿಕ್ ಪೀಚ್ ಬಣ್ಣದ ಡ್ರೆಸ್‌ನಲ್ಲಿ ಕತ್ರೀನಾ ಮಿಂಚುತ್ತಿದ್ದರೆ ಶಾರುಖ್ ಕಪ್ಪು ಸೂಟ್ ಧರಿಸಿ ಆಗಮಿಸಿದ್ದರು. ಇವರೊಂದಿಗೆ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್, ಕಿರಣ್ ರಾವ್, ನತಾಶಾ ಪೂನಾವಲ್ಲಾ ಕೂಡಾ ಪಾರ್ಟಿಗೆ ಆಗಮಿಸಿದ್ದರು. ಇನ್ನು ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ತನ್ನ ಪುತ್ರಿ ಆರಾಧ್ಯ ಬಚ್ಚನ್ ಜೊತೆ ಈ ಭೋಜನಕೂಟಕ್ಕೆ ಆಗಮಿಸಿದ್ದರು.
Comments