ಇತ್ತೀಚಿಗೆ ಈ ಕನ್ನಡ ಸಿನಿಮಾ ಮೆಚ್ಚುಕೊಂಡಿದ್ದರಂತೆ ಕಿಚ್ಚ..!!

ಪುನೀತ್, ರಕ್ಷಿತ್, ಸುದೀಪ್- ಯಾರೇ ಹೊಸಬರು ಸಿನಿಮಾ ಮಾಡಿದರೂ, ಅದೊಂದಿಷ್ಟು ಚೆನ್ನಾಗಿ ಕಂಡರೂ ಮೆಚ್ಚಿಕೊಂಡಾಡುತ್ತಾರೆ. ಆ ಚಿತ್ರಗಳಿಗೆ ಅವರ ಮೆಚ್ಚುಗೆಯೇ ಟಾನಿಕ್ ಕೂಡ.
ಇದೀಗ ಸಂಚಾರಿ ವಿಜಯ್ ನಟನೆಯ '6 ನೇ ಮೈಲಿ' ಚಿತ್ರದ ಟ್ರೈಲರ್ ನೋಡಿದ ನಟ ಸುದೀಪ್, ಟೈಟಲ್ ಟ್ರ್ಯಾಕ್ ಹಾಡನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ತುಂಬಾ ಹಾರ್ಡ್ ವರ್ಕ್ ಮಾಡಿರುವ ತಂಡ. ಸಂಗೀತ ಸ್ಟ್ರಾಂಗ್ ಆಗಿದೆ' ಎಂದಿದ್ದಾರೆ. ಸೀನಿ ನಿರ್ದೇಶನದ ಎರಡು ನೈಜ ಘಟನೆಗಳನ್ನು ಒಳಗೊಂಡ ಸಿನಿಮಾ ಇದು. ಆರು ಮಂದಿ ಕನ್ನಡದ ರೇಡಿಯೋ ಆರ್‌ಜೆಗಳು ಒಟ್ಟಿಗೆ ನಟಿಸಿರುವ ಸಿನಿಮಾ ಇದು. ನಡು ರಾತ್ರಿ ಒಂದು ಗ್ಯಾಂಗ್ ಟ್ರಕ್ಕಿಂಗ್ ಹೋಗುವಾಗ ಸಂಭವಿಸುವ ಘಟನೆಗಳೇ ಚಿತ್ರದ ಕತೆ. ಸಾಯಿ ಕಿರಣ್ ಸಂಗೀತ ಸುದೀಪ್‌ಗೆ ಇಷ್ಟವಾಗಿದೆ.
Comments