'ಆ ಕರಾಳ ರಾತ್ರಿ' ಸಿನಿಮಾ ಚಿತ್ರೀಕರಣ ಕಂಪ್ಲೀಟ್...?

ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಜೆಕೆ ಹಾಗೂ ಅನುಪಮ ಗೌಡ ಅಭಿನಯದ ಆ ಕರಾಳ ರಾತ್ರಿ ಸಿನಿಮಾ ಸೆಟ್ಟೇರಿತ್ತು. ಎರಡು ಮೂರು ವಾರದ ಹಿಂದೆ ಶುರುವಾದ ಆ ಕರಾಳ ರಾತ್ರಿ ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗಿ ಹೋಗಿದೆ. ಅರೆ ಸಿನಿಮಾ ಚಿತ್ರೀಕರಣವೇ ಮುಗಿತಾ, ಅಂತ ಆಶ್ಚರ್ಯ ಪಡುವ ಹಾಗಿಲ್ಲ.
ಯಾಕೆಂದರೆ ಇದು ಸತ್ಯ. ನಿರ್ದೇಶಕ ದಯಾಳ್ ಪದ್ಮನಾಭನ್ ಹದಿನಾಲ್ಕು ದಿನಗಳಲ್ಲಿ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಅನುಪಮ ಗೌಡ ಹಾಗೂ ಜೆಕೆ ಸಿನಿಮಾದಲ್ಲಿ ಅಭಿನಯಿಸಿದ್ದು ಆ ಕರಾಳ ರಾತ್ರಿ 80 ರ ದಶಕದಲ್ಲಿ ನಡೆಯೋ ಥ್ರಿಲ್ಲಿಂಗ್ -ಮಿಸ್ಟ್ರಿ ಕಥೆಯಂತೆ. ಅನುಪಮ ಹಾಗೂ ಜೆಕೆ ರೆಟ್ರೋ ಸ್ಟೈಲ್ ನಲ್ಲಿರುವ ಫೋಟೋಗಳನ್ನ ಬಿಡುಗಡೆ ಮಾಡಿದ ಚಿತ್ರತಂಡ ಸಿನಿಮಾದ ಬಗ್ಗೆ ಮತ್ತಷ್ಟು ಕೌತುಕ ಹುಟ್ಟುವಂತೆ ಮಾಡಿತ್ತು. 14 ದಿನಗದಲ್ಲಿ ಸಿನಿಮಾ ಮುಗಿಸಿದ ನಂತರ ದಯಾಳ್ ಹಾಗೂ ಟೀಂ 'ಪುಟ 109' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರತಂಡ ಬಾಲೂರು ಕಾಫಿ ಎಸ್ಟೇಟ್ ನಲ್ಲಿ ಶೂಟಿಂಗ್ ಶುರು ಮಾಡಿದ್ದು ಜೆಕೆ ಸಿನಿಮಾದಲ್ಲಿ ಪೋಲಿಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ಹಾಗೂ ನಿರ್ದೇಶಕ ನವೀನ್ ಕೃಷ್ಣ ಕೂಡ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಅನುಪಮ ಗೌಡ, ಜೆ ಕೆ ಹಾಗೂ ದಯಾಳ್ ಪದ್ಮನಾಭನ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದು ಪುಟ 109 ಕೂಡ ಆದಷ್ಟು ಬೇಗ ಚಿತ್ರೀಕರಣ ಮುಗಿಸಿ ಪ್ರೇಕ್ಷಕರ ಮುಂದೆ ಬರಲಿದೆ.
Comments