ಮದುವೆಗೆ ರೆಡಿ ಆಗ್ತಿದ್ದರಂತೆ ನಟಿ 'ರಾಗಿಣಿ'

ಮದುವೆ ಮನೆಯಲ್ಲಿ ಸಂಭ್ರಮ ಪಡುತ್ತಿರುವುದು ನಟಿ ರಾಗಿಣಿ. ಹೌದು ನಟಿ ರಾಗಿಣಿ ಕೈ ತುಂಬಾ ಮೆಹಂದಿ ಹಾಕಿಕೊಂಡು ಮದುವೆಗಾಗಿ ತಯಾರಿ ಮಾಡಿಕೊಂಡಿದ್ದಾರೆ. ಅರೆ ಇಷ್ಟು ಬೇಗ ತುಪ್ಪದ ಬೆಡಗಿ ಮದುವೆ ಆಗುತ್ತಾರ ಅಂತ ಆಶ್ಚರ್ಯ ಪಡಬೇಡಿ. ಯಾಕಂದ್ರೆ ಮದುವೆ ರಾಗಿಣಿ ಅವರದಲ್ಲಾ.
ನಟಿ ರಾಗಿಣಿ ಬ್ಯುಸಿ ಶೆಡ್ಯೂಲ್ ನಲ್ಲಿ ಬಿಡುವು ಮಾಡಿಕೊಂಡು ಸ್ನೇಹಿತನ ಮದುವೆಗಾಗಿ ಹಿಮಾಚಲ್ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ರಾಗಿಣಿ ಅವರ ಆಪ್ತ ಸ್ನೇಹಿತ ಮೆಹೆಕ್ ಅವರ ಮದುವೆ ಹಿಮಾಚಲ್ ಪ್ರದೇಶದಲ್ಲಿ ನಡೆಯುತ್ತಿದ್ದು ರಾಗಿಣಿ ಸೇರಿದಂತೆ ಇಡೀ ಕುಟುಂಬ ಮದುವೆ ಸಂಭ್ರಮದಲ್ಲಿ ಬ್ಯುಸಿ ಆಗಿದೆ. ಸ್ನೇಹಿತನ ಮದುವೆಗಾಗಿ ವಾರಕ್ಕೂ ಮುಂಚೆಯೇ ಹಿಮಾಚಲ ಸೇರಿರುವ ಚಂದನವನದ ಗಿಣಿ ತನ್ನ ಮದುವೆಯಂತೆ ಸಂಭ್ರದಿಂದ ಭಾಗಿ ಆಗಿದ್ದಾರೆ. ಅಷ್ಟೇ ಅಲ್ಲದೆ ನೀಲಿ ಬಣ್ಣದ ವಸ್ತ್ರವನ್ನ ಧರಿಸಿ ಸುಂದರವಾದ ಸ್ಥಳಗಳಲ್ಲಿ ಪೋಟೋಗಳನ್ನ ತೆಗೆಸಿಕೊಂಡಿದ್ದಾರೆ.
Comments