ಟಗರಿನ ಪೊಗರಿಗೆ ಮನಸೋತ ಚಿಕ್ಕಮಗಳೂರು ಮಂದಿ

'ಟಗರು' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನಲೆಯಲ್ಲಿ ಚಿತ್ರತಂಡ ರಾಜ್ಯದ ವಿವಿಧೆಡೆ ಭೇಟಿ ನೀಡಿ ಅಭಿಮಾನಿಗಳಿಗೆ, ಸಿನಿರಸಿಕರಿಗೆ ಧನ್ಯವಾದ ಹೇಳಿದೆ.
ಅಂತೆಯೇ ಚಿಕ್ಕಮಗಳೂರಿನ ಮಿಲನ ಚಿತ್ರಮಂದಿರದಲ್ಲಿ 'ಟಗರು' ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಶಿವರಾಜ್ ಕುಮಾರ್ ಹಾಗೂ ಡಾಲಿ ಪಾತ್ರಧಾರಿ ಧನಂಜಯ ಅವರು ಆಗಮಿಸಿದ್ದಾರೆ. ಆಜಾದ್ ಪಾರ್ಕ್ ವೃತ್ತದಿಂದ ಮಿಲನ ಟಾಕೀಸ್ ವರೆಗೆ ಮೆರವಣಿಗೆ ನಡೆಸಲಾಗಿದೆ. ಅಪಾರ ಸಂಖ್ಯೆಯಲ್ಲಿದ್ದ ಅಭಿಮಾನಿಗಳು 'ಟಗರು' ಶಿವಣ್ಣ, ಡಾಲಿ ಧನಂಜಯ ಪರವಾಗಿ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಫೋಟೋ, ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಶಿವಣ್ಣ ಮಾತನಾಡುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ.
Comments