ಕನ್ನಡದ ಕೋಟ್ಯಧಿಪತಿ ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ

ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿದ್ದ 'ಕೌನ್ ಬನೇಗಾ ಕರೋಡ್‌ಪತಿ' ಕಾರ್ಯಕ್ರಮದ ಕನ್ನಡ ಅವತರಣಿಕೆ ಯಲ್ಲಿ ಇದುವರೆಗೆ ಪುನೀತ್ ನಿರೂಪಣೆಯಲ್ಲಿ ಎರಡು ಸೀಸನ್‌ಗಳು ಮಾತ್ರ ಮೂಡಿಬಂದಿವೆ. ಇದೀಗ ಹೊಸ ಸೀಸನ್‌ಗೆ ರಾಕಿಂಗ್ ಸ್ಟಾರ್ ಯಶ್ ನಿರೂಪಣೆ ಮಾಡಲಿದ್ದಾರಂತೆ.
ಹೌದು, ಏಪ್ರಿಲ್‌ನಲ್ಲಿ ಕನ್ನಡದ ಕೋಟ್ಯಧಿಪತಿ ಶುರುವಾಗಲಿದ್ದು, ಯಶ್ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಸದ್ದಿಲ್ಲದೇ ಶೋ ಸಿದ್ಧತೆ ಕೂಡ ನಡೆದಿದೆ ಎನ್ನಲಾಗಿದೆ. ಇನ್ನು ಸದ್ಯ ಬಹುನೀರಿಕ್ಷಿತ ಕೆಜಿಎಫ್ ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿ ಆಗಿರುವ ಯಶ್ ತಮ್ಮ ಮುಂಬರುವ ಶೋ ಬಗ್ಗೆ ಸಾಧ್ಯವಾಷ್ಟು ಮಟ್ಟಿಗೆ ತಿಳಿದುಕೊಳ್ಳುತ್ತಿದ್ದಾರೆಂತೆ.
ಇದು ಅಪ್ಪು ಅಭಿಮಾನಿಗಳಿಗೆ ಕಹಿ ಸುದಿಯಾಗಿದ್ದಾರೆ, ಯಶ್ ಅಭಿಮಾನಿಗಳಿಗೆ ಇದು ಸಿಹಿ ಸುದ್ದಿಯಾಗಿದೆ. ಇದಲ್ಲದೇ ಯಶ್ ಈ ಕಾರ್‍ಯಮವನ್ನು ಎಷ್ಟರ ಮಟ್ಟಿಗೆ ಯುಶಸ್ವಿಗೊಳಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
Comments