ಬಾಲಿವುಡ್ ತಾರಾ ಬಣದಲ್ಲಿ ಭರ್ಜರಿ ಮದುವೆಗೆ ಸಿದ್ಧತೆ

ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಮಗಳು ಸೋನಂ ಕಪೂರ್ ಮದುವೆಗೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಮೂಲಗಳ ಪ್ರಕಾರ ಮೇ.11ರಂದು ಸೋನಂ ಕಪೂರ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾಳೆ.
ಮೇ.11ರಂದು ಜಿನಿವಾದಲ್ಲಿ ಸೋನಂ ಮದುವೆ ನಡೆಯಲಿದೆ ಎಂದು ಮೂಲಗಳು ಹೇಳಿವೆ. ಸೋನಂ ಕಪೂರ್ ಉದ್ಯಮಿ ಆನಂದ್ ಅಹುಜಾ ಕೈ ಹಿಡಿಯಲಿದ್ದಾಳೆ. ಮದುವೆ ದಿನಾಂಕ ಹಾಗೂ ಸ್ಥಳವನ್ನು ನಿರ್ಧರಿಸಲಾಗಿದೆ. ವಿಮಾನ ಟಿಕೆಟ್ ಬುಕ್ಕಿಂಗ್ ಕಾರ್ಯ ನಡೆಯುತ್ತಿದೆ. ಹಿಂದೂ ಸಂಪ್ರದಾಯದಂತೆ ಮದುವೆ ನಡೆಯಲಿದ್ದು ಸೋನಂ ತಂದೆ ಅನಿಲ್ ಕಪೂರ್ ಆಹ್ವಾನ ಪತ್ರ ಹಂಚುವುದ್ರಲ್ಲಿ ಬ್ಯುಸಿಯಾಗಿದ್ದಾರೆ. ಅಬು ಜಾನೀ ಮತ್ತು ಸಂದೀಪ್ ಖೋಸ್ಲಾ ಸೋನಂ ವೆಡ್ಡಿಂಗ್ ಡ್ರೆಸ್ ಡಿಸೈನ್ ಮಾಡಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಸೋನಂ ಆನಂದ್ ಪ್ರೀತಿಗೆ ಬಿದ್ದಿದ್ದಾಳೆ. ಅನಿಲ್ ಕಪೂರ್ 60ನೇ ವರ್ಷದ ಹುಟ್ಟುಹಬ್ಬದಲ್ಲಿ ಆನಂದ್ ಕೂಡ ಪಾಲ್ಗೊಂಡಿದ್ದರು.
Comments