ಸ್ಟಾರ್ ನಿರ್ಮಾಪಕರೊಬ್ಬರು ಅನುಷ್ಕಾ ಸೆಟ್ಟಿಗೆ ಆಕ್ಷನ್ ಕಟ್ ಹೇಳಲಿದ್ದಾರೆ..!

ಅನುಷ್ಕಾ ಶೆಟ್ಟಿ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಇದೇ ಕಾರಣಕ್ಕಾಗಿ ಈವರೆಗೂ ಒಪ್ಪಿಕೊಂಡಿರುವ ಚಿತ್ರಗಳನ್ನು ಹೊರತುಪಡಿಸಿ ಬೇರಾವ ಚಿತ್ರಗಳಲ್ಲೂ ನಟಿಸುತ್ತಿಲ್ಲ ಎಂದು ಹೇಳಲಾಗಿತ್ತು.
ಆದರೆ ಅನುಷ್ಕಾ ಇದನ್ನು ನಿರಾಕರಿಸಿದ್ದು ಭಾಗಮತಿ, ಬಾಹುಬಲಿ ನಂತರ ಇದುವರೆಗೂ ಹೇಳಿಕೊಳ್ಳುವಂತಹ ಸ್ಕ್ರಿಪ್ಟ್ ಸಿಗಲಿಲ್ಲವಾದ್ದರಿಂದ ಯಾವ ಚಿತ್ರದಲ್ಲೂ ನಟಿಸುತ್ತಿಲ್ಲ ಎಂದು ಹೇಳಿದ್ದರು. ಹೊಸ ಮಾಹಿತಿಯೊಂದರ ಪ್ರಕಾರ ಅನುಷ್ಕಾ ಮುಂದಿನ ಚಿತ್ರವನ್ನು ಸ್ಟಾರ್ ನಿರ್ದೇಶಕ ಗೌತಮ್ ಮೆನನ್ ನಿರ್ದೇಶಿಸುತ್ತಿದ್ದಾರೆ ಎನ್ನಲಾಗಿದೆ. ಬಾಹುಬಲಿ ತಾರೆ ಈ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಸದ್ಯಕ್ಕೆ ವಿಕ್ರಮ್ ಜೊತೆ ಗೌತಮ್ ಮೆನನ್ ಸಿನಿಮಾ ಮಾಡುತ್ತಿದ್ದು ಈ ಪ್ರಾಜೆಕ್ಟ್ ಮುಗಿದ ಕೂಡಲೇ ಅನುಷ್ಕಾ ಹೊಸ ಸಿನಿಮಾ ಸೆಟ್ಟೇರಲಿದೆ ಎನ್ನಲಾಗುತ್ತಿದೆ.
Comments