ರಾಣಿ ಮುಖರ್ಜಿ ನಟಿನೆಯ 'ಹಿಚ್ಕಿ' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ

ನಾಲ್ಕು ವರ್ಷಗಳ ಗ್ಯಾಪ್ ನಂತರ ರಾಣಿ ಮತ್ತೆ ಬಣ್ಣ ಹಚ್ಚಿದ್ದು, ‘ಹಿಚ್ಕಿ’ ಚಿತ್ರದ ಮೂಲಕ ಮತ್ತೆ ಬಾಲಿವುಡ್‌ನಲ್ಲಿ ನೆಲೆಯೂರಬೇಕು ಎಂಬುದು ರಾಣಿ ಕನಸಂತೆ. ಯಶ್‌ರಾಜ್ ಫಿಲ್ಮ್ಸ್ ಬ್ಯಾನರ್ ಅಡಿ ನಿರ್ಮಾಣಗೊಂಡಿರುವ ಈ ಸಿನಿಮಾವನ್ನು ಸಿದ್ಧಾರ್ಥ್ ಪಿ. ಮಲ್ಹೋತ್ರಾ ನಿರ್ದೇಶಿಸಿದ್ದಾರೆ.
ಚಿತ್ರ ಬಿಡುಗಡೆಗೂ ಮುನ್ನ ನಿನ್ನೆ ಶಿಕ್ಷಕಿಯರಿಗಾಗಿ ಚಿತ್ರದ ವಿಶೇಷ ಪ್ರದರ್ಶನವನ್ನು ಮುಂಬೈನಲ್ಲಿ ಏರ್ಪಡಿಸಲಾಗಿತ್ತು. 'ಹಿಚ್ಕಿ' ಸಿನಿಮಾದಲ್ಲಿ ರಾಣಿ ಮುಖರ್ಜಿ ನೈನಾ ಮಥುರ್ ಎಂಬ ನರ ಮಂಡಲದ ನ್ಯೂನ್ಯತೆಯಿಂದ ಬಳಲುವ ಶಿಕ್ಷಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತನಗಿರುವ ನ್ಯೂನ್ಯತೆಯನ್ನು ಮೆಟ್ಟಿ ನಿಂತು ನೈನಾ ಹೇಗೆ ಸಾಧನೆ ಮಾಡುತ್ತಾಳೆ. ಹೇಗೆ ತನ್ನ ವಿದ್ಯಾರ್ಥಿಗಳ ಪ್ರೀತಿಯನ್ನು ಗೆದ್ದು, ಇತರ ಶಿಕ್ಷಕ/ಶಿಕ್ಷಕಿಯರಿಗೆ ಮಾದರಿಯಾಗುತ್ತಾಳೆ ಎಂಬುದೇ ಚಿತ್ರದ ಕಥೆ.
Comments