ಕರೀನಾ ಜಿಮ್ ಬಟ್ಟೆ ಗಾಗಿ ಎಷ್ಟು ಖರ್ಚು ಮಾಡ್ತಾರೆ ಗೊತ್ತಾ..?

ಸೆಲಬ್ರೆಟಿಗಳು ಸಮಯ ಸಂದರ್ಭಕ್ಕೆ ತಕ್ಕಂತೆ ಡ್ರೆಸ್ ಮಾಡಿಕೊಳ್ಳೋದ್ರಲ್ಲಿ ಬೇಬೋ ಎಕ್ಸ್ ಪರ್ಟ್. ಪ್ರವಾಸ, ಶಾಪಿಂಗ್, ಈವೆಂಟ್, ಪಾರ್ಟಿ ಇವನ್ನೆಲ್ಲ ಬಿಟ್ಟುಬಿಡಿ.
ಜಿಮ್ ಗೆ ಕೂಡ ಕರೀನಾ ಸಖತ್ ಸ್ಟೈಲಿಶ್ ಆಗಿಯೇ ಬರ್ತಾಳೆ. ದುಬಾರಿ ಟಿ-ಶರ್ಟ್ ಗಳನ್ನು ತೊಡುತ್ತಾಳೆ. ಇತ್ತೀಚೆಗಷ್ಟೆ ಫಿಟ್ನೆಸ್ ಸೆಶನ್ ಗೆ ಹಾಜರಾಗಿದ್ದ ಕರೀನಾ ಧರಿಸಿದ್ದು ಬರೋಬ್ಬರಿ 45,000 ರೂಪಾಯಿ ಬೆಲೆಬಾಳುವ ಟಿ-ಶರ್ಟ್. ಕರೀನಾ ಕಪ್ಪು ಲೆಗ್ಗಿಂಗ್ಸ್ ಹಾಗೂ ಗುಚಿ ಕಂಪನಿಯ ಎಸಿ-ಡಿಸಿ ಟಿ-ಶರ್ಟ್ ತೊಟ್ಟಿದ್ದಳು. ಈ ಟೀಶರ್ಟ್ ಬೆಲೆ 720 ಡಾಲರ್. ಅಂದ್ರೆ ಸರಿಸುಮಾರು 46,000 ರೂಪಾಯಿ. ನಾವೆಲ್ಲ ಜಿಮ್ ಅಂದಾಕ್ಷಣ ಹಳೆ ಬಟ್ಟೆ ತೊಟ್ಟು ಹೊರಟುಬಿಡ್ತೀವಿ. ಆದ್ರೆ ಕರೀನಾ ಮಾತ್ರ ಜಿಮ್ ಗೂ ಬೆಲೆಬಾಳುವ ಬಟ್ಟೆಗಳನ್ನೇ ಧರಿಸಿ ಬರ್ತಾಳೆ.
Comments