ಕರುನಾಡ ಚಕ್ರವರ್ತಿ ಶಿವಣ್ಣನ ಅಭಿಮಾನಿಗಳಿಗೆ ಇಲ್ಲಿದೆ ಗುಡ್ ನ್ಯೂಸ್..!!



ಕರುನಾಡ ಚಕ್ರವರ್ತಿ,ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಯಾವುದೇ ಪಾತ್ರ ಕೊಟ್ಟರು ತಮ್ಮನ್ನು ತಾವು ತೊಡಗಿಸಿಕೊಂಡು ಪಾತ್ರಗಳಿಗೆ ಜೀವ ತುಂಬುವುದರೊಂದಿಗೆ ತಮ್ಮದೇ ಆದ ಛಾಪು ಮೂಡಿಸಿರುವುದು ಎಲ್ಲರಿಗೂ ತಿಳಿದ ಸಂಗತಿ. ಸುಮಾರು 30 ವರ್ಷಗಳ ಸಿನಿಪಯಣದಲ್ಲಿ ಅನೇಕ ಸೋಲು ಗೆಲುವುಗಳನ್ನು ಕಂಡಿರುವ ಶಿವಣ್ಣ, ಅನೇಕ ನಿರ್ದೇಶಕರಿಗೆ ನಿರ್ಮಾಪಕರಿಗೆ ಹಾಗು ಕಲಾವಿದರಿಗೆ ಲೈಫ್ ಕೊಟ್ಟಿದ್ದಾರೆ. ಹಾಗೆಯೇ ಅಂತರಾಷ್ಟ್ರಿಯ ಮಟ್ಟದಲ್ಲೂ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.
ಇತ್ತೀಚೆಗೆ ತೆರೆಕಂಡ ದುನಿಯಾ ಸೂರಿ ನಿರ್ದೇಶನದ 'ಟಗರು' ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಮಿಂಚುವುದರ ಮೂಲಕ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮೊತ್ತದ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿದ್ದಾರೆ. ಈಗ 'ಕವಚ' ಅನ್ನೋ ಶೀರ್ಷಿಕೆಯಲ್ಲಿ ಸೆಟ್ಟೇರಲಿರುವ ಪ್ರಮೋದ್ ಚಕ್ರವರ್ತಿ ನಿರ್ದೇಶನದ ಹೊಸ ಚಿತ್ರಕ್ಕೆ ಶಿವಣ್ಣ ನಾಯಕನಾಗಿ ಮಿಂಚಲಿದ್ದಾರೆ ಎಂದು ಸುದ್ದಿಯಾಗಿದೆ. ಈ ಚಿತ್ರವು ಸಮಾಜ ಹಾಗು ಶಾಲಾ ಶಿಕ್ಷಕನ ನಡುವೆ ಇರುವ ಸಂಭಂದವನ್ನು ಆಧರಿಸುವ ಕಥೆಯಾಗಿದ್ದು, ಈ ಕಥೆಯಲ್ಲಿ ಒಬ್ಬ ಶಾಲಾ ಶಿಕ್ಷಕ ಹೇಗೆ ಸಮಾಜ ತಿದ್ದುವ ಕೆಲಸ ಮಾಡುತ್ತಾನೆ ಹಾಗು ವಿದ್ಯಾರ್ಥಿ ಮತ್ತು ಶಿಕ್ಷಕನ ನಡುವೆ ಸಂಭಂದ ಹೇಗಿರಬೇಕು ಎಂದು ಹೇಳಲಾಗಿದೆ.ಈ ಚಿತ್ರದಲ್ಲಿ ಶಾಲಾ ಮುಖ್ಯ ಶಿಕ್ಷಕನಾಗಿ ಹಾಗು ಡಾ.ಶಿವರಾಜ್ ಕುಮಾರ್ ಪಾತ್ರ ನಿರ್ವಹಿಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
Comments