ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್..!!
ವಿಶ್ವರೂಪಂ, ಬಾಹುಬಲಿ, ಥಗ್ಸ್ ಆಫ್ ಹಿಂದುಸ್ತಾನ್ ಮುಂತಾದ ಚಿತ್ರಗಳಿಗೆ ಸ್ಟಂಟ್ ಪರ್ಫಾರ್ಮರ್ ಆಗಿದ್ದ ಲೀ ವಿಟಾಕರ್ ಇದೀಗ ಕನ್ನಡಕ್ಕೆ ಬರುತ್ತಿದ್ದಾರೆ. ಯಾಕೆ ಎನ್ನುವ ಪ್ರಶ್ನೆಗೆ? ಇಲ್ಲಿದೆ ಉತ್ತರ. ಮುಂದೆ ಓದಿ…
ಸೂರಪ್ಪ ಬಾಬು ನಿರ್ಮಾಣದ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರಕ್ಕೆ ಹಾಲಿವುಡ್ ಆಯಕ್ಷನ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಮೇ 10 ರಿಂದ ಸರ್ಬಿಯಾ ದೇಶದ ಬೆಲ್‌ಗ್ರೇಡ್ ನಲ್ಲಿ ನಡೆಯಲಿರುವ ಸಾಹಸಮಯ ದೃಶ್ಯಗಳ ಸಂಯೋಜನೆಗೆ ಲೀ ವಿಟಾಕರ್ ಅವರೇ ಬೇಕು ಎಂದು ಚಿತ್ರತಂಡ ನಿರ್ಧರಿಸಿದೆ. ಚಿತ್ರದ ಉತ್ತರಾರ್ಧದಲ್ಲಿ ಬರುವ ಮೂರು ಹೊಡೆದಾಟದ ಸನ್ನಿವೇಶ ಮತ್ತು ಎರಡು ಛೇಸಿಂಗ್ ಸರಣಿಯನ್ನು ಲೀ ನಿರ್ದೇಶಿಸಲಿದ್ದಾರೆ. ಅಲ್ಲಿಗೆ ಇದು ಕನ್ನಡದ ಮೊಟ್ಟ ಮೊದಲ ದುಬಾರಿ ಸಾಹಸ ಸನ್ನಿವೇಶ ಚಿತ್ರೀಕರಣ ಅನ್ನಿಸಿಕೊಳ್ಳಲಿದೆ. ಯೂನಿಟ್ಟು, ಸಹಕಲಾವಿದರು ಮತ್ತು ಚೇಸಿಂಗ್ಗೆ ಬೇಕಾದ ವಾಹನಗಳೂ ಸೇರಿದಂತೆ ಲೀ ವಿಟಾಕರ್ ಅವರ ಸಂಭಾವನೆಯೇ ಐದು ಕೋಟಿ ಮೀರಲಿದೆ. ಕೋಟಿಗೊಬ್ಬ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಸಾಹಸ ದೃಶ್ಯಗಳನ್ನು ವಿಭಿನ್ನವಾಗಿ ಚಿತ್ರಿಸಿದ್ದೆವು. ಕೋಟಿಗೊಬ್ಬ-3 ಚಿತ್ರಕ್ಕೂ ಸುದೀಪ್ ಅವರಿಗೆ ವಿಶೇಷವಾದ ಸಾಹಸ ಸನ್ನಿವೇಶಗಳಿದ್ದವು. ಈ ಚಿತ್ರದಲ್ಲಿ ಅವೆಲ್ಲವನ್ನೂ ಮೀರಿಸುವಂಥ ಸಾಹಸ ಸನ್ನಿವೇಶಗಳಿರುತ್ತವೆ. ವಿರಾಮದ ನಂತರ ಬರುವ ಸನ್ನಿವೇಶಕ್ಕೋಸ್ಕರವೇ ಸುಮಾರು ಆರುಕೋಟಿ ವೆಚ್ಚವಾಗುವ ಸಾಧ್ಯತೆಯಿದೆ. ಹಾಲಿವುಡ್ ಆಯಕ್ಷನ್ ಡೈರೆಕ್ಟರ್ ಬೇಕು ಎಂದು ನಿರ್ದೇಶಕರು ಕೇಳಿದಾಗ ಇಲ್ಲವೆನ್ನಲಾಗಲಿಲ್ಲ. ಸಿನಿಮಾ ಅದ್ದೂರಿಯಾಗಿ ಬರಬೇಕು ಅನ್ನುವುದೇ ನನ್ನ ಉದ್ದೇಶ. ಅಲ್ಲದೇ, ಸುದೀಪ್ ಅವರು ಇಂಟರ್ನ್ಯಾಷನಲ್ ಸ್ಟಾರ್. ಅವರ ಸಿನಿಮಾ ಕೂಡ ಆ ಮಟ್ಟದಲ್ಲೇ ಇರಬೇಕು ಅನ್ನೋದು ನನ್ನಾಸೆ ಎನ್ನುತ್ತಾರೆ ಸೂರಪ್ಪ ಬಾಬು.
Comments