ಬಹಳ ವರ್ಷಗಳ ಆಸೆ ಕೊನೆಗೂ ಈಡೇರಿಸಿಕೊಂಡ ಅಪ್ಪು

ಅನೂಪ್ ಮತ್ತು ನಿರೂಪ್ ಭಂಡಾರಿ ಸಹೋದರರ ಎರಡನೇ ಚಿತ್ರ 'ರಾಜರಥ' ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಈ ಚಿತ್ರದಲ್ಲಿ ಪಾತ್ರವರ್ಗದ ಜೊತೆ ಪುನೀತ್ ಕೂಡಾ ಒಂದು ಸ್ಪೆಷಲ್ ಕ್ಯಾರೆಕ್ಟರ್‌ನಲ್ಲಿ ಇರೋದು ಗೊತ್ತಿರೋ ವಿಚಾರವೇ. ಈ ಚಿತ್ರದಲ್ಲಿ ಬರುವ ಬಸ್‌ಗೆ, ಅಂದ್ರೆ 'ರಾಜರಥ'ಕ್ಕೆ ಅಪ್ಪು ಧ್ವನಿಯಾಗಿದ್ದಾರೆ.
ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪುನೀತ್‌ಗೆ ತಾನು ಎಂದಾದರೊಂದು ದಿನ ಅನಿಮೇಶನ್ ಅಥವಾ ಕಾರ್ಟೂನ್ ಕ್ಯಾರೆಕ್ಟರ್‌ವೊಂದಕ್ಕೆ ಧ್ವನಿ ಕೊಡಬೇಕು ಅಂತ ಬಹಳ ಆಸೆ ಇತ್ತಂತೆ. ಅನೇಕ ಚಿತ್ರಗಳಿಗೆ ನಿರೂಪಕ, ಹಾಡುಗಾರ ಎಲ್ಲವೂ ಆಗಿರುವ ಅವರ ಧ್ವನಿಗೆ ಅನಿಮೇಷನ್‌ಗೆ ಜೀವ ತುಂಬುವ ಅವಕಾಶ ಮಾತ್ರ ಇದುವರೆಗೂ ಸಿಕ್ಕಿರಲಿಲ್ಲ. ಆದರೆ ರಾಜರಥ ಚಿತ್ರದಲ್ಲಿ ಅಪ್ಪು ಆಸೆ ಈಡೇರಿದೆ. ತಮ್ಮ ಚಿತ್ರದ ಪ್ರಧಾನ ಪಾತ್ರಧಾರಿಯಾದ ಬಸ್‌ಗೆ ವಾಯ್ಸ್ ಕೊಡ್ತೀರಾ ಅಂತ ಅನೂಪ್ ಕೇಳಿದ ಕೂಡ್ಲೇ ಅಪ್ಪು ಖುಷಿಯಿಂದ ಒಪ್ಪೇ ಬಿಟ್ರಂತೆ.
Comments