ಸೊಸೆಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್..!!

ಪ್ರತಿ ವಿಚಾರದಲ್ಲಿಯೂ ವಿಶೇಷವಾಗಿ ನಿಲ್ಲುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇತ್ತೀಚಿನ ದಿನಗಳಲ್ಲಿ ಸಿನಿಮಾಗೆ ಕೊಡುವಷ್ಟೇ ಪ್ರಾಮುಖ್ಯತೆ ಫ್ಯಾಮಿಲಿಗೂ ನೀಡುತ್ತಿದ್ದಾರೆ. ಮಗಳ ಶಾಲೆಯ ವಾರ್ಷಿಕೋತ್ಸವ, ಬರ್ತಡೇ ಪಾರ್ಟಿ ಹೀಗೆ ಕೆಲಸದ ಬ್ಯುಸಿಯಲ್ಲಿಯೂ ಬಿಡುವು ಮಾಡಿಕೊಂಡು ಕುಟುಂಬಸ್ಥರಿಗಾಗಿ ಸಮಯ ನೀಡುತ್ತಿದ್ದಾರೆ.
ತಾನಷ್ಟೇ ಅಲ್ಲದೆ ತನ್ನ ಸುತ್ತಾ ಮುತ್ತಲಿನವರನ್ನೂ ಖುಷಿಯಿಂದ ನೋಡಿಕೊಳ್ಳಬೇಕು ಎನ್ನುವ ಉದ್ದೇಶವಿರುವ ಕಿಚ್ಚ ಸುದೀಪ್ ತನ್ನ ಸೊಸೆಯ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ ನೀಡಿದ್ದಾರೆ. ತನ್ನ ಸಹೋದರಿ ಸುಜಾತ ಸಂಜೀವ್ ಅವರ ಪುತ್ರಿ ಶ್ರೇಯಾ ಅವರ ಹುಟ್ಟುಹಬ್ಬಕ್ಕೆ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಶ್ರೇಯಾ ಅವರಿಗೆ ಮಾವ ಸುದೀಪ್ ಅವರಿಂದ ಕಪ್ಪು ಬಣ್ಣದ ಜೀಪ್ ಉಡುಗೊರೆಯಾಗಿ ಸಿಕ್ಕಿದೆ. ಸುಜಾತ ಸಂಜೀವ್ ಅವರಿಗೆ ಒಬ್ಬ ಪುತ್ರ ಕೂಡ ಇದ್ದು ಸಂಚಿತ್ ಸಂಜೀವ್ ಮಾವನಂತೆ ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳಲು ಈಗಾಗಲೇ ಕೆಲಸ ಆರಂಭ ಮಾಡಿದ್ದಾರೆ. ಒಟ್ಟಾರೆ ತಮ್ಮ ಹುಟ್ಟುಹಬ್ಬವನ್ನ ಅಭಿಮಾನಿಗಳು ಸೇರೆ ಸ್ಪೆಷಲ್ ಮಾಡಿದರೆ ಕಿಚ್ಚ ತಮ್ಮ ಮನೆಯವರ ಬರ್ತಡೇಯನ್ನ ವಿಶೇಷ ಉಡುಗೊರೆ ನೀಡುವ ಮೂಲಕ ಹುಟ್ಟುಹಬ್ಬದ ಖುಷಿಯನ್ನ ಮತ್ತಷ್ಟು ಹೆಚ್ಚಿಸಿದ್ದಾರೆ.
Comments