ಸೌಥ್ ಫಿಲ್ಮಂ ಇಂಡಸ್ಟ್ರಿ ತಮ್ಮತ್ತ ತಿರುಗಿ ನೋಡುವಂತೆ ಮಾಡಿರುವ ಅಭಿನಯ ಚಕ್ರವರ್ತಿ..!!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ನಟರಾಗಿದ್ದಾರೆ. ಇಡೀ ಸೌಥ್ ಫಿಲ್ಮಂ ಇಂಡಸ್ಟ್ರಿಯೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್.
ಕಿಚ್ಚನ ಹವಾ ಕೇವಲ ಕನ್ನಡ ಮಾತ್ರವಲ್ಲ ತಮಿಳು, ತೆಲುಗೆ, ಬಾಲಿವುಡ್ ಹಾಗೂ ಹಾಲಿವುಡ್‌ನಲ್ಲಿಯೂ ಇದೆ. ಎಲ್ಲಿ ನೋಡಿದರು ಸುದೀಪ್ ಅಭಿಮಾನಿಗಳೇ ಕಾಣಿಸಿಕೊಳ್ಳುತ್ತಾರೆ. ಪರಭಾಷೆಯ ಫ್ಯಾನ್ಸ್ ಕಿಚ್ಚನ ಚಿತ್ರಗಳಿಗೆ ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಅದರಲ್ಲೂ ಟಾಲಿವುಡ್‌ನ ಅಭಿಮಾನಿಗಳಿಗಂತೂ ಸುದೀಪ್ ಅವರ ಚಿತ್ರಗಳಂದ್ರೆ ಪಂಚ ಪ್ರಾಣ. ಇದೀಗ ತೆಲುಗು ಅಭಿಮಾನಿಯೊಬ್ಬ ಕಿಚ್ಚನಿಗೆ 'ದಯವಿಟ್ಟು ತೆಲುಗಿನಲ್ಲೂ ಸಿನಿಮಾ ಮಾಡಿ. ನಾವು ನಿಮ್ಮನ್ನ ಮತ್ತು ನಿಮ್ಮ ಧ್ವನಿಯನ್ನ ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇವೆ' ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್ 'ಒಳ್ಳೆ ಸ್ಕ್ರಿಪ್ಟ್ ಸಿಕ್ಕರೆ ಖಂಡಿತವಾಗಿಯೂ ತೆಲುಗು ಸಿನಿಮಾ ಮಾಡುತ್ತೇನೆ' ಎಂದಿದ್ದಾರೆ.
Comments