ಫ್ಯಾಷನ್ ಜಗತ್ತಿಗೆ ಪಾದಾರ್ಪಣೆ ಮಾಡಿದ ಶಾನ್ವಿ ಶ್ರೀವಾತ್ಸವ

ಶಾನ್ವಿ ಕನ್ನಡ ಸಿನಿಮಾರಂಗಕ್ಕೆ ಬಂದ ಮೇಲೆ ಸುಮಾರು ಏಳು ಚಿತ್ರಗಳಲ್ಲಿ ಅಭಿನಯಿಸಿದ್ದು ಅದರಲ್ಲಿ ಬಹುತೇಕ ಸಿನಿಮಾಗಳು ಹಿಟ್ ಲೀಸ್ಟ್ ಸೇರಿಕೊಂಡಿವೆ. ಸದ್ಯ ರಕ್ಷಿತ್ ಶೆಟ್ಟಿ ಜೊತೆಯಲ್ಲಿ ಅವನೇ 'ಶ್ರೀ ಮನ್ನಾರಾಯಣ' ಸಿನಿಮಾದಲ್ಲಿ ಬ್ಯುಸಿ ಆಗಿರುವ ಶಾನ್ವಿ ಫ್ಯಾಷನ್ ಲೋಕಕ್ಕೆ ಕಾಲಿಟ್ಟಿದ್ದಾರೆ.
ಬಣ್ಣದ ಜಗತ್ತಿನಲ್ಲಿ ವೃತ್ತಿ ಜೀವನವನ್ನ ಕಂಡುಕೊಂಡಿರುವ ಶಾನ್ವಿ ತನ್ನದೇ ಸ್ವಂತ ಉದ್ಯೋಗ ಆರಂಭಕ್ಕೆ ನಾಂದಿ ಹಾಡಿದ್ದಾರೆ. ತನ್ನ ಸ್ನೇಹಿತೆ ನಿಶಾರ ಜೊತೆ ಸೇರಿ 'ಮನಃ ಕೌಚರ್' ಎನ್ನುವ ಫ್ಯಾಷನ್ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಇಂಥದೊಂದು ಕೆಲಸವನ್ನ ಕರ್ನಾಟಕದಲ್ಲೇ ಆರಂಭ ಮಾಡಬೇಕು ಎಂದು ಯೋಜನೆ ಹಾಕಿಕೊಂಡಿದ್ದ ಶಾನ್ವಿ ತಮ್ಮ ಕನಸಿನ ಕೆಲಸಕ್ಕೆ ಚಾಲನೆ ನೀಡಿದ್ದಾರೆ.
'ಮನಃ ಕೌಚರ್' ಅಡಿಯಲ್ಲಿ ಸಾನ್ವಿ ಹಾಗೂ ನಿಶಾರ ಡಿಸೈನ್ ಮಾಡಿದ ಉಡುಪುಗಳು ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಬರಲಿವೆ. ಸದ್ಯ ಹೆಸರನ್ನ ಫೈನಲ್ ಮಾಡಿರುವ ಮಾಸ್ಟರ್ ಪೀಸ್ ಬೆಡಗಿ ಇನ್ನು ಕೆಲವೇ ದಿನಗಳಲ್ಲಿ ಅಧಿಕೃತವಾಗಿರುವ ಲೋಗೋವನ್ನು ಅನಾವರಣ ಮಾಡಲಿದ್ದಾರೆ.
Comments