'ಮರ್ಕ್ಯೂರಿ' ಮೂಖಿ ಚಿತ್ರ ಕನ್ನಡದಲ್ಲೂ ತೆರೆ ಕಾಣುತ್ತಿದೆ

1987ರಲ್ಲಿ ತೆರೆ ಕಂಡಿದ್ದ ಮೂಖಿ ಚಿತ್ರ ಪುಷ್ಪಕ ವಿಮಾನ ಚಿತ್ರ ಎಲ್ಲರ ಮನ ತಣಿಸಿತ್ತು. ಅಲ್ಲದೆ ಎಲ್ಲರು ನಮ್ಮ ಭಾಷೆಯ ಸಿನಿಮಾ ಎನ್ನುತ್ತಿದ್ದರು ಅಲ್ಲದೆ ಭಾಷಾಯ ಗಡಿ ದಾಟಿ ಭಾರತದ ಎಲ್ಲಾ ಭಾಷೆಗಳಲ್ಲೂ ಬಿಡುಗಡೆಯಾಗಿತ್ತು. ಇದೀಗ ಅದೇ ರೀತಿಯ ಚಿತ್ರವೊಂದನ್ನು ಕಾರ್ತಿಕ್ ಸುಬ್ಬರಾಜ್ ಮಾಡಿದ್ದು ಈ ಚಿತ್ರ ಕನ್ನಡದಲ್ಲೂ ಪ್ರದರ್ಶನ ಕಾಣಲಿದೆ.
ಪಿಜ್ಜಾ ಹಾರರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಕಾರ್ತಿಕ್ ಸುಬ್ಬರಾಜ್ ಇದೀಗ ಮರ್ಕ್ಯೂರಿ ಟೈಟಲ್ ನ ಹೊಸ ಚಿತ್ರ ಮಾಡಿ ಮುಗಿಸಿದ್ದಾರೆ. ಇದೊಂದು ಮೂಖಿ ಚಿತ್ರವಾಗಿದ್ದರಿಂದ ಏಪ್ರಿಲ್ 13ರಂದು ಕನ್ನಡದಲ್ಲೂ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಪ್ರಭುದೇವ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸನತ್ ರೆಡ್ಡಿ, ದೀಪಕ್ ಪರಮೇಶ್, ಇಂದುಜಾ ಮತ್ತು ರಮ್ಯಾ ನಂಬೀಸನ್ ಪಾತ್ರವರ್ಗದಲ್ಲಿದ್ದಾರೆ. 1992ರಲ್ಲಿ ಪಾದರಸದ ವಿಷದಿಂದ 84 ಜನರು ಮೃತಪಟ್ಟಿದ್ದು ಇದು ಅದರ ಸ್ಮಾರಕ ಎಂಬ ದೃಶ್ಯಗಳು ಟೀಸರ್ ಕಾಣಿಸುತ್ತದೆ. ಚಿತ್ರದಲ್ಲಿ ಕಾರ್ತಿಕ್ ಹಾರರ್ ಅಂಶ ಸೇರ್ಪಡೆ ಮಾಡಿದ್ದಾರೆ.
Comments