ಮಾರ್ಚ್ 23 ರಂದು ತೆರೆ ಮೇಲೆ 'ರಾಜರಥ'ದ ಅಬ್ಬರ ಶುರು
ಅನೂಪ್ ಭಂಡಾರಿ ಮತ್ತು ನಿರೂಪ್ ಭಂಡಾರಿ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ 'ರಾಜರಥ' ಮಾರ್ಚ್ 23 ರಂದು ಬಿಡುಗಡೆಯಾಗ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರ ನಿರ್ಮಾಣವಾಗಿದ್ದು, ಆರಂಭದಿಂದಲೂ ಸಿನಿ ರಸಿಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ನಿರೂಪ್ ಭಂಡಾರಿ -ಆವಂತಿಕಾ ಶೆಟ್ಟಿ ಮತ್ತೆ ಜೊತೆಯಾಗಿ ಅಭಿನಯಿಸಿದ್ದು, ರವಿಶಂಕರ್ ಡಿಫರೆಂಟ್ ಲುಕ್ ನಲ್ಲಿ ಮೋಡಿ ಮಾಡಿದ್ದಾರೆ. ಚಿತ್ರದಲ್ಲಿ ಬಸ್ ಕೂಡ ಪ್ರಮುಖ ಭಾಗವಾಗಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಸ್ ಗೆ ಧ್ವನಿ ನೀಡಿದ್ದಾರೆ. ಕಮಲ್ ಹಾಸನ್ ಅಭಿನಯಿಸಿದ್ದ 'ಮುಂದೆ ಬನ್ನಿ' ಹಾಡನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ವಿಭಿನ್ನ ರೀತಿಯಲ್ಲಿ ಕಾಲೇಜ್ ಸ್ಟೋರಿಯನ್ನು ಹೇಳುವ ಪ್ರಯತ್ನ ಮಾಡಲಾಗಿದೆ ಎನ್ನುತ್ತಾರೆ 'ರಾಜರಥ' ನಿರ್ದೇಶಕ ಅನೂಪ್ ಭಂಡಾರಿ.
Comments