ಬಾಲಿವುಡ್ ಚಿತ್ರದಲ್ಲಿ ಮಗ್ನರಾದ 'ಯು ಟರ್ನ್' ಬೆಡಗಿ

20 Mar 2018 8:01 PM | Entertainment
458 Report

ಶ್ರದ್ಧಾ ಶ್ರೀನಾಥ್ ಅಭಿನಯದ ಬಾಲಿವುಡ್ ಚಿತ್ರ 'ಮಿಲನ್ ಟಾಕೀಸ್' ಚಿತ್ರೀಕರಣ ಲಖ್ನೋದಲ್ಲಿ ಆರಂಭವಾಗಿದೆ. ಫಿಲ್ಮಿ ಕೀಡಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗ್ತಿದೆ. ಚತ್ವಾಲ ನಿರ್ಮಾಣ ಮಾಡಿರುವ ಚಿತ್ರವನ್ನು ತಿಗಮಾನ್ಷು ದುಲಿಯಾ ನಿರ್ದೇಶಿಸಿದ್ದಾರೆ.

ಅಲಿ ಫಜಲ್, ಶ್ರದ್ಧಾ ಶ್ರೀನಾಥ್, ರಿಚಾ ಸಿನ್ಹಾ, ದೀಪ್ ರಾಜ್ ರಾಣಾ, ಅಶುತೋಷ್ ರಾಣಾ, ಸಂಜಯ್ ಮಿಶ್ರಾ, ಯಶ್ ಪಾಲ್ ಶರ್ಮಾ ಮೊದಲಾದವರು ಅಭಿನಯಿಸಿದ್ದಾರೆ.ಪ್ರೇಕ್ಷಕರಿಗೆ ಹೊಸ ಕತೆಯನ್ನು ಹೇಳಲು ನಾನು ಉತ್ಸುಕನಾಗಿದ್ದೇನೆ ಎಂದು ಕತೆ, ಚಿತ್ರಕತೆ ಸಂಭಾಷಣೆ ಬರೆದಿರುವ ನಿರ್ದೇಶಕ ದುಲಿಯಾ ಹೇಳಿದ್ದಾರೆ. ತವರು ನೆಲದಲ್ಲಿ ಚಿತ್ರೀಕರಣ ನಡೆಯುತ್ತಿರುವುದು ಖುಷಿಯಾಗಿದೆ ಎಂದು ಅಲಿ ಫಜಲ್ ತಿಳಿಸಿದ್ದಾರೆ. ಶ್ರದ್ಧಾ ಶ್ರೀನಾಥ್ ಕೂಡ ಚಿತ್ರದ ಕುರಿತಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

 

Edited By

Shruthi G

Reported By

Madhu shree

Comments