ಇಲ್ಲಿದೆ ನೋಡಿ ಶ್ರೇಯಾ ಶರಣರವರ ವಿವಾಹ ಮಹೋತ್ಸವದ ಫೋಟೋ ಶೂಟ್

ಹಿಂದೂ ಸಂಪ್ರದಾಯದಂತೆ ಶ್ರಿಯಾ ಹಾಗೂ ಆಂಡ್ರೇ ವಿವಾಹವಾಗಿದ್ದಾರೆ. ಆತ್ಮೀಯ ಸ್ನೇಹಿತರು ಹಾಗೂ ಕುಟುಂಬಸ್ಥರು ಮಾತ್ರ ಸಮಾರಂಭಕ್ಕೆ ಸಾಕ್ಷಿಯಾದ್ರು. ದಕ್ಷಿಣ ಭಾರತದ ಪ್ರಸಿದ್ಧ ನಟಿ ಶ್ರೇಯಾ ಶರಣರವರ ಮದುವೆ ಗುಟ್ಟಾಗಿ ನೆರವೇರಿತ್ತು. ರಷ್ಯಾ ಮೂಲದ ಗೆಳೆಯ ಆಂಡ್ರೇ ಕೊಸ್ಚೀವ್ ರನ್ನು ಶ್ರಿಯಾ ವರಿಸಿದ್ದಾರೆ.
ಉದಯ್ಪುರದಲ್ಲಿ ನಡೆದ ಅದ್ಧೂರಿ ವಿವಾಹದ ಫೋಟೋಗಳು ಈಗ ವೈರಲ್ ಆಗಿವೆ. ಅಚ್ಚ ಕೆಂಪು ಬಣ್ಣದ ಲೆಹಂಗಾ, ಸಾಂಪ್ರದಾಯಿಕ ಆಭರಣ ತೊಟ್ಟಿದ್ದ ಶ್ರೇಯಾ ಅಪ್ಪಟ ಭಾರತೀಯ ವಧುವಿನ ಅವತಾರದಲ್ಲಿದ್ರು. ಆಂಡ್ರೇ ಕೂಡ ಕುರ್ತಾ, ಪೈಜಾಮದಲ್ಲಿ ಮಿಂಚಿದ್ದಾರೆ. ವಿಶೇಷ ಅಂದ್ರೆ ಆಂಡ್ರೇ ತಮ್ಮ ಪತ್ನಿ ಶ್ರಿಯಾಗಾಗಿ ಹಿಂದಿಯಲ್ಲಿ ಕವನ ವಾಚಿಸಿದ್ರು. ನಿಶ್ಚಿತಾರ್ಥ, ಸಂಗೀತ ಕಾರ್ಯಕ್ರಮ ಹಾಗೂ ಮೆಹಂದಿ ಸಂಭ್ರಮ ಕೂಡ ಜೋರಾಗಿತ್ತು.
Comments