ಚಿತ್ರೀಕರಣದ ವೇಳೆ ಗಾಯಗೊಂಡ ಬಾಲಿವುಡ್ ಬೆಡಗಿ ಆಲಿಯಾ ಭಟ್
ಬಾಲಿವುಡ್ ಬೆಡಗಿ ಆಲಿಯಾ ಭಟ್ ಶೂಟಿಂಗ್ ವೇಳೆ ಗಾಯಗೊಂಡಿದ್ದಾಳೆ. ಆಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ರಸ್ತೆ ಮೇಲೆ ಬಿದ್ದ ಆಲಿಯಾ ಭುಜಕ್ಕೆ ಗಂಭೀರ ಗಾಯವಾಗಿದೆ. ಚಿಕಿತ್ಸೆ ನಡೆಸಿದ ವೈದ್ಯರು ಕೆಲ ವಾರ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಚಿತ್ರಕ್ಕಾಗಿ ಆಲಿಯಾ ಕುದುರೆ ಸವಾರಿ ಕಲಿತಿದ್ದಳು ಎನ್ನಲಾಗಿದೆ. ಶೂಟಿಂಗ್ ವೇಳಾಪಟ್ಟಿ ತುಂಬಾ ದಣಿವು ತರಿಸುವಂತಿದೆ. ನಾವು ನಿರಂತರವಾಗಿ ಚಿತ್ರೀಕರಣ ಮಾಡುತ್ತಿದ್ದೇವೆ ಎಂದು ಕೆಲ ದಿನಗಳ ಹಿಂದೆ ಆಲಿಯಾ ಸಂದರ್ಶನವೊಂದರಲ್ಲಿ ಹೇಳಿದ್ದಳು. ಗಾಯವಾಗಿದ್ರೂ ಆಲಿಯಾ ಮುಂಬೈನಲ್ಲಿರುವ ತನ್ನ ನಿವಾಸಕ್ಕೆ ಬಂದಿಲ್ಲ ಎನ್ನಲಾಗಿದೆ. ಬಿಡುವಿಲ್ಲದ ವೇಳಾಪಟ್ಟಿ ಕಾರಣ ಆಲಿಯಾ ಜನ್ಮದಿನವನ್ನೂ ಬ್ರಹ್ಮಾಸ್ತ್ರ ಸೆಟ್ ನಲ್ಲಿಯೇ ಆಚರಿಸಿಕೊಂಡಿದ್ದಳು. ಚಿತ್ರತಂಡ ಇದಕ್ಕೆಲ್ಲ ವ್ಯವಸ್ಥೆ ಮಾಡಿತ್ತು. ವಿಶೇಷವಾಗಿ ರಣಬೀರ್ ಕಪೂರ್ ಬರ್ತ್ ಡೇ ಪಾರ್ಟಿ ನೇತೃತ್ವ ವಹಿಸಿದ್ದರು.
Comments