ವಿವಾಹದ ಬಗ್ಗೆ ಕುತೂಹಲಕಾರಿ ವಿಷಯ ಬಿಚ್ಚಿಟ್ಟ ಶೃತಿ ಹರಿಹರನ್



ಇತ್ತೀಚಿಗೆ ಅನೇಕ ಸ್ಟಾರ್ ನಟರು ಮದುವೆಯ ಬಗ್ಗೆ ಹೆಚ್ಚು ಒಲವು ತೋರುತ್ತಿರುವುದು ಕಂಡು ಬರುತ್ತಿದೆ. ಅದೇ ರೀತಿ ಇದೀಗ ನಟಿ ಶೃತಿ ಹರಿಹರನ್ ಇದೇ ಮೊದಲ ಬಾರಿ ಮಾಧ್ಯಮದ ಮುಂದೆ ಮದುವೆ ಬಗ್ಗೆ ಮಾತನಾಡಿದ್ದಾರೆ. ಯುಗಾದಿ ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ಶೃತಿ ಮದುವೆ ಬಗ್ಗೆ ಮಾತನಾಡಿದ್ದು ನಾನು ಈಗಾಗಲೇ ಮನಸ್ಸಿನಲ್ಲೇ ಮದುವೆ ಆಗಿದ್ದೇನೆ ಎಂದಿದ್ದಾರೆ.
ಮದುವೆ ಬಗ್ಗೆ ಮಾತನಾಡುತ್ತಾ ನಾನು ಎಂದಿಗೂ ಸಿಂಗಲ್ ಅಂತ ಹೇಳಿಲ್ಲ. ನಾನು ಮನಸ್ಸಿನಲ್ಲೇ ಮದುವೆ ಆಗಿದ್ದೇನೆ. ಅಪ್ಪ ಅಮ್ಮನಿಗಾಗಿ ಈಗ ಮದುವೆ ಆಗಬೇಕು ಅಷ್ಟೇ ಎಂದು ಕಡ್ಡಿ ಮುರಿದಂತೆ ಹೇಳಿಕೆ ನೀಡಿದ್ದಾರೆ ಶೃತಿ ಹರಿಹರನ್. ಶೃತಿ ಹರಿಹರನ್ ಅವರಿಗೆ ಸಾಕಷ್ಟು ವರ್ಷಗಳಿಂದ ಸ್ನೇಹಿತರಾಗಿರುವ ರಾಮ್ ಕುಮಾರ್ ಅವರೇ ಶೃತಿ ಮನಸ್ಸು ಕದ್ದಿರುವ ಹುಡುಗ. ಸುಮಾರು ಏಳು ವರ್ಷದಿಂದ ಇಬ್ಬರು ಪ್ರೀತಿ ಮಾಡುತ್ತಿದ್ದು ಡ್ಯಾನ್ಸ್ ಕ್ಲಾಸ್ ಹೋಗುವಾಗಲೇ ಶೃತಿ ಪ್ರೀತಿ ಮಾಡುತ್ತಿದ್ದರಂತೆ. ರಾಮ್ ಕುಮಾರ್ ಕೂಡ ನೃತ್ಯ ಕಲಾವಿದ ಹಾಗೂ ಅಂತರಾಷ್ಟ್ರಿಯ ಮಟ್ಟದಲ್ಲಿ ನೃತ್ಯ ನಿರ್ದೇಶಕರಾಗಿ ಹೆಸರು ಮಾಡಿರುವವರು. ಇಂದು ಶೃತಿ ಈ ಮಟ್ಟದಲ್ಲಿ ಹೆಸರು ಮಾಡಿರುವುದಕ್ಕೆ ರಾಮ್ ಕುಮಾರ್ ಅವರೇ ಕಾರಣವಂತೆ.
Comments