ಕೊಟ್ಟ ಮಾತಿನಂತೆ ನಡೆದುಕೊಂಡ ರೋಹಿತ್ ಶರ್ಮಾ

ಮೊಹಮ್ಮದ್ ನೀಲಂ ಶ್ರೀಲಂಕಾ ಮೂಲದವನು. ಆದ್ರೆ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಅಂದ್ರೆ ನೀಲಂಗೆ ಅಚ್ಚುಮೆಚ್ಚು. ನೀಲಂ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ತಂದೆಗೆ ಕ್ಯಾನ್ಸರ್ ಇರುವ ವಿಷಯ ಗೊತ್ತಾಗಿತ್ತು. ಮರಳಿ ಲಂಕಾಗೆ ತೆರಳಲು ಆತನ ಬಳಿ ಹಣವಿರಲಿಲ್ಲ.
ರೋಹಿತ್ ಶರ್ಮಾ ಕೂಡಲೇ ನೀಲಂಗೆ ವಿಮಾನದ ಟಿಕೆಟ್ ವ್ಯವಸ್ಥೆ ಮಾಡಿದ್ದರು. ಕೊಲಂಬೋಗೆ ಬಂದಾಗ ಭೇಟಿಯಾಗುವುದಾಗಿ ಭರವಸೆ ಕೂಡ ನೀಡಿದ್ದರು. ರೋಹಿತ್ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಕಳೆದ ಶುಕ್ರವಾರ ಕೊಲಂಬೋದಲ್ಲಿರುವ ನೀಲಂ ಮನೆಗೆ ಭೇಟಿ ನೀಡಿದ್ದಾರೆ. ರೋಹಿತ್ ಶರ್ಮಾರ ಸರಳತೆ ಹಾಗೂ ಪರೋಪಕಾರಿ ಮನೋಭಾವ ನೋಡಿ ನೀಲಂ ಕೂಡ ಭಾವುಕರಾದ್ರು. ಟೀಂ ಇಂಡಿಯಾ ಹಾಗೂ ರೋಹಿತ್ ಶರ್ಮಾ ಬಗೆಗಿನ ತಮ್ಮ ಅಭಿಮಾನ ಎಂದಿಗೂ ಬದಲಾಗುವುದೇ ಇಲ್ಲ ಎನ್ನುತ್ತಾರೆ ಮೊಹಮ್ಮದ್ ನೀಲಂ. ತಮ್ಮ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿರೋ ಕ್ರಿಕೆಟ್ ಪ್ರೇಮಿಗೆ ಅಲ್ಪ ಸಹಾಯ ಮಾಡಿದ್ದು ರೋಹಿತ್ ಶರ್ಮಾಗೂ ಸಾರ್ಥಕ ಭಾವ ಮೂಡಿಸಿದೆ.
Comments