ದಾಂಪತ್ಯ ಜೀವನದ ಗುಟ್ಟು ರಟ್ಟು ಮಾಡಿದ ದೂತ್ ಪೇಡ ದಿಗಂತ್
ಸ್ಯಾಂಡಲ್ ವುಡ್ ನ ದೂತ್ ಪೇಡ ಅಂದ್ರೆ ಸಾಕು ನೆನಪಾಗೋದೇ ದಿಗಂತ್. ಗುಳಿಗೆನ್ನೆಯ ಈ ನಟ ದಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆದ್ರೆ ಇನ್ ಮುಂದೆ ಹಾಗೆ ಅನ್ನೋಹಾಗಿಲ್ಲ. ಯಾಕಂದ್ರೆ ದಿಗಂತ್ ಮದುವೆ ಆಗ್ತಾರಂತೆ.ಹೌದು ಐಂದ್ರಿತಾ ರೇ ಕೊರಳಿಗೆ ಮಾಂಗಲ್ಯಧಾರಣೆ ಮಾಡಲು ರೆಡಿ ಆದ ದಿಗಂತ್.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ನಟ ದಿಗಂತ್ ಹಾಗೂ ಲೂಸ್ ಮಾದ ಯೋಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ 'ಯಾರೀ ಮೀಟರ್' ಚೆಕ್ ಮಾಡುವ ಸುತ್ತು ಮುಗಿದ ಮೇಲೆ ಶಿವಣ್ಣ ಒಂದು ಪ್ರಶ್ನೆ ಕೇಳಿದರು. ಅದಕ್ಕೆ ದಿಗಂತ್ ಉತ್ತರ ಕೊಡದೆ ಬೇರೆ ದಾರಿ ಇರಲಿಲ್ಲ.
ನಿಮ್ಮ ಜೀವನದಲ್ಲಿ ಯಾವ ಕ್ಷಣಕ್ಕೋಸ್ಕರ, ನೀವು ಕಾಯಲು ಆಗುವುದಿಲ್ಲ, ಕಾಯುವುದಿಲ್ಲ.?'' ಎಂದು ಶಿವಣ್ಣ ಕೇಳಿದರು. ಅದಕ್ಕೆ ದಿಗಂತ್ ''ನನ್ನ ಮದುವೆಗೆ ಕಾಯುತ್ತಿದ್ದೇನೆ. ಇದೇ ವರ್ಷ ಮದುವೆ ಆಗಲು ಮನಸ್ಸು ಮಾಡಿದ್ದೇನೆ. ಅದಕ್ಕೋಸ್ಕರ ಕಾಯುತ್ತಿದ್ದೇನೆ'' ಎಂದು ಉತ್ತರಿಸಿದರು ದಿಗಂತ್. 'ಇದೇ ವರ್ಷ ಮದುವೆ ಆಗಲು ಪ್ಲಾನ್ ಮಾಡಿದ್ದೇನೆ'' ಎಂದು ದಿಗಂತ್ ಹೇಳಿದ ಕೂಡಲೆ, ''ಆಂಡಿ (ಐಂದ್ರಿತಾ ರೇ) ಬಿ ರೆಡಿ. ಮದುವೆ ಊಟಕ್ಕೆ ಕಾಯುತ್ತಿದ್ದೇವೆ. ನಾವು ಖಂಡಿತ ಮದುವೆಗೆ ಬರುತ್ತೇವೆ'' ಎಂದು ಶಿವಣ್ಣ ಹೇಳಿದರು
Comments