ಅಪ್ಪು ಹುಟ್ಟುಹಬ್ಬಕ್ಕಾಗಿ ಸ್ಪೇಷಲ್ ಗಿಫ್ಟ್ ಕೊಟ್ಟ ಅಭಿಮಾನಿ

ರಾಜಕುಮಾರ ಚಿತ್ರದಲ್ಲಿ ಅಪ್ಪು ಯಾವ ರೀತಿ ಕಾಣಿಸಿಕೊಂಡಿದ್ರೋ ಅದೇ ಮಾದರಿಯಲ್ಲಿ ಕೇಕ್ ವೊಂದನ್ನ ರೆಡಿ ಮಾಡಿಸಿದ್ದಾರೆ. ಸುಮಾರು ಎಂಬತ್ತು ಕೆಜಿ ತೂಕದ, ಆರುವರೆ ಅಡಿ ಎತ್ತರದ ಕೇಕ್ ತಯಾರು ಮಾಡಲಾಗಿದೆ. ಮಾಗಡಿ ಪಟ್ಟಣದ ಶಿವಕುಮಾರ್ ಹಾಗೂ ಮಲ್ಲಿಕಾರ್ಜುನ್ ಎಂಬುವವರೂ ಈ ಕೇಕ್ ಅನ್ನ ತಯಾರು ಮಾಡಿದ್ದಾರೆ.
ಕಳೆದ ಒಂದು ವಾರದಿಂದ ಈ ಕೇಕ್ ಅನ್ನ ತಯಾರು ಮಾಡಲಾಗಿದೆ. ಇನ್ನು ಪುನೀತ್ ರಾಜಕುಮಾರ್ ಚಿತ್ರದಲ್ಲಿ ಕಾಣಿಸಿಕೊಂಡ ರೀತಿಯಲೇ ಕೇಕ್ ಅನ್ನ ತಯಾರಿಸಲಾಗಿದ್ದು, ಅವರ ಭುಜದ ಮೇಲೆ ಪಾರಿವಾಳ ಇರುವ ರೀತಿಯಲ್ಲೇ ಕೇಕ್ ಮೇಲೂ ಸಹಾ ಪಾರಿವಾಳವನ್ನು ಕೂಡ ಮಾಡಲಾಗಿದೆ. ಪುನೀತ್ ಅವರ ನಿವಾಸದ ಮುಂದೆ ಈ ಕೇಕ್ ಇಟ್ಟು ಪುನೀತ್ ಅವರ ಕೈಯಲ್ಲಿ ಕಟ್ ಮಾಡಿಸುವ ಆಸೆ ಈ ಅಭಿಮಾನಿಗಳದ್ದು. ಸಾವಿರಾರು ಅಭಿಮಾನಿಗಳ ಮಧ್ಯೆ ವಿಭಿನ್ನತೆ ಇರಲಿ ಎನ್ನುವ ಕಾರಣದಿಂದಾಗಿ ಅಪ್ಪು ಅಭಿಮಾನಿಗಳು ಇಂಥದೊಂದು ಪ್ರಯತ್ನವನ್ನ ಮಾಡಿದ್ದಾರೆ.
Comments