ಅಪ್ಪು ಬರ್ತ್ ಡೇಗೆ ಶಿವಣ್ಣನಿಂದ ಸ್ಪೆಷಲ್ ಗಿಫ್ಟ್
ಇಂದು ಪುನೀತ್ ರಾಜ್ ಕುಮಾರ್ ರವರ ಹುಟ್ಟು ಹಬ್ಬ, ಅಪ್ಪು ಅಭಿಮಾನಿಗಳಿಗಂತೂ ಸಂಭ್ರಮಹೋ ಸಂಭ್ರಮ. ಶಿವರಾಜ್ ಕುಮಾರ್ ರವರು ಅಪ್ಪು ಬರ್ತ್ ಡೇಗೆ ಮನೆಗೆ ಹೋಗಿ ಹುಟ್ಟು ಹಬ್ಬಕ್ಕೆ ಶುಭ ಕೋರಿರುವುದಲ್ಲದೆ, ಮತ್ತೊಂದು ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ.
ಪುನೀತ್ ಬಹು ನಿರೀಕ್ಷಿತ ಚಿತ್ರ ನಟಸಾರ್ವಭೌಮ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ. ಇದೇ ಸಂದರ್ಭದಲ್ಲಿ ಶಿವಣ್ಣ ಸಿಹಿ ಸುದ್ಧಿಯೊಂದನ್ನು ನೀಡಿದ್ದಾರೆ. ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಒಟ್ಟಿಗೆ ಸಿನಿಮಾ ಮಾಡ್ತಾರಂತೆ! ಶಿವಣ್ಣ ಬರ್ತ್ ಡೇ ದಿನವೇ ಈ ಸ್ಟಾರ್ ನಟರ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆಯಂತೆ! ಚಿತ್ರದ ಹೆಸರು ಇನ್ನೂ ನಿರ್ಧಾರವಾಗಿಲ್ಲ.
Comments