ರಹಸ್ಯವಾಗಿ ವಿವಾಹವಾಗಿದ್ದರಂತೆ ದಕ್ಷಿಣದ ಖ್ಯಾತ ನಟಿ
ಹೌದು ದಕ್ಷಿಣದ ಖ್ಯಾತ ನಟಿ ಶ್ರೇಯ ಸರಣ್, ರಷ್ಯಾ ಮೂಲದ ಗೆಳೆಯನ ಜೊತೆಗೆ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಎಲ್ಲೆಡೆ ಸುದ್ದಿ ಹಬ್ಬಿದೆ. ಇವರು ಫೆಬ್ರವರಿಯಲ್ಲೇ ಶ್ರೇಯ ಸರಣ್ ಮದುವೆ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದವು. ಆದ್ರೆ ಶ್ರಿಯಾ ಮಾತ್ರ ಮದುವೆ ಸದ್ಯಕ್ಕಿಲ್ಲ ಎನ್ನುತ್ತಿದ್ರು.
ಮೂಲಗಳ ಪ್ರಕಾರ ಮಾರ್ಚ್ 12ರಂದು ಮುಂಬೈನ ಲೋಖಂಡ್ವಾಲಾದಲ್ಲಿರೋ ಶ್ರೇಯ ಅಪಾರ್ಟ್ಮೆಂಟ್ ನಲ್ಲೇ ಮದುವೆ ನಡೆದಿದೆ. ಆತ್ಮೀಯ ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ಮಾತ್ರ ಸಮಾರಂಭದಲ್ಲಿ ಹಾಜರಿದ್ದರು. ನಟ ಮನೋಜ್ ಬಾಜ್ಪೇಯಿ ಹಾಗೂ ಪತ್ನಿ ಶಬಾನಾ ನೆರೆಮನೆಯವರೇ ಆಗಿರೋದ್ರಿಂದ, ಅವರು ಕೂಡ ಮದುವೆಗೆ ಬಂದಿದ್ದರು. ಹಿಂದು ಸಂಪ್ರದಾಯದಂತೆ ವಿವಾಹ ನೆರವೇರಿದೆ. ಮದುವೆಗೂ ಮುನ್ನ ಅದ್ಧೂರಿ ಪಾರ್ಟಿ ಕೂಡ ಆಯೋಜಿಸಲಾಗಿತ್ತು. ಮದುವೆಯಲ್ಲಿ ಶ್ರೇಯ ಪಿಂಕ್ ಲೆಹಂಗಾದಲ್ಲಿ ಕಂಗೊಳಿಸುತ್ತಿದ್ರು ಅಂತಾ ಮೂಲಗಳು ತಿಳಿಸಿವೆ. ಶ್ರಿಯಾ ಸರಣ್ ಕೈಹಿಡಿದಿರುವ ಆಂಡ್ರೇ ಟೆನಿಸ್ ಆಟಗಾರ. ಜೊತೆಗೆ ಉದ್ಯಮಿಯೂ ಹೌದು. ರಷ್ಯಾದ ಮಾಸ್ಕೋದಲ್ಲಿ ರೆಸ್ಟೋರೆಂಟ್ ಗಳನ್ನು ಹೊಂದಿದ್ದಾರೆ. ಮದುವೆ ಸುದ್ದಿಯನ್ನು ಖುದ್ದು ಶ್ರಿಯಾರಿಂದ್ಲೇ ತಿಳಿಯಲು ಅಭಿಮಾನಿಗಳು ಕಾತರರಾಗಿದ್ದಾರೆ.
Comments