ನವರಸ ನಾಯಕನಿಗೆ ಹುಟ್ಟು ಹಬ್ಬದ ಸಡಗರ...!!
ತಮ್ಮ ಅದ್ಬುತ ನಟನೆಯ ಮೂಲಕ ಕನ್ನಡಿಗರ ಮನ ಗೆದ್ದ ಈ ನಾಯಕ ಹಾಸ್ಯ ಇನ್ನಿತರೇ ಕಲಾ ಪ್ರತಿಭೆಯುಳ್ಳ ನವರಸಗನ್ನು ಬಲ್ಲ ನಾಯಕ ನಟನಾಗಿದ್ದರೆ. ನವರಸ ನಾಯಕ ಎಂಬ ಬಿರುದನ್ನೂ ಸಹ ಪಡೆದಿದ್ದರೆ. ಹೌದು ಇಂದು ಜಗ್ಗೇಶ್ ರವರ ಹುಟ್ಟು ಹಬ್ಬ ಇದರ ವಿಶೇಷವಾಗಿ 8 ಎಂಎಂ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
ಎಸ್. ಹರಿಕೃಷ್ಣ ನಿರ್ದೇಶನದಲ್ಲಿ, ನಾರಾಯಣಸ್ವಾಮಿ, ಇನ್ ಫ್ಯಾಂಟ್ ಪ್ರದೀಪ್, ಸಲೀಮ್ ಷಾ ಅವರ ನಿರ್ಮಾಣದಲ್ಲಿ '8 ಎಂಎಂ' ಚಿತ್ರ ಮೂಡಿ ಬಂದಿದೆ. ಜಗ್ಗೇಶ್ ಹಿಂದೆಂದೂ ಕಾಣಿಸಿಕೊಳ್ಳದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳು ಮಾತ್ರವಲ್ಲ, ಸಿನಿರಸಿಕರಲ್ಲಿಯೂ ಚಿತ್ರ ಕುತೂಹಲ ಮೂಡಿಸಿದೆ. ಇದೇ ವೇಳೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಜಗ್ಗೇಶ್, ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಪತ್ನಿ ಸಮೇತರಾಗಿ ಕೊಲ್ಲೂರಿಗೆ ತೆರಳಿದ ಜಗ್ಗೇಶ್ ನವಚಂಡಿಕಾಯಾಗ ಕೈಗೊಂಡಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ತಂದೆ, ತಾಯಿ ಸೇರಿ ಎಲ್ಲರಿಗೂ ನಮನ ಸಲ್ಲಿಸಿದ್ದಾರೆ.
Comments