ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಪವರ್ ಸ್ಟಾರ್

ಪವರ್ ಸ್ಟಾರ್ ಹುಟ್ಟು ಹಬ್ಬಕ್ಕೆ ಶುಭಕೋರಲು ಅಪಾರ ಸಂಖ್ಯೆಯ ಅಭಿಮಾನಿಗಳು ಮಧ್ಯರಾತ್ರಿಯೇ ಜಮಾಯಿಸಿದ್ದರು. ನಂತರ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ತಮ್ಮ ನೆಚ್ಚಿನ ನಟನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.
ಈ ವರ್ಷ ಪುನೀತ್ ಈ ವರ್ಷದ ಹುಟ್ಟು ಹಬ್ಬಕ್ಕೆ ಮತ್ತಷ್ಟು ಮೆರಗು ತಂದಿದ್ದು ದು 'ನಟಸಾರ್ವಭೌಮ' ಚಿತ್ರದ ಕಾರಣಕ್ಕೆ. 'ರಾಜಕುಮಾರ' ಹಾಗೂ 'ಅಂಜನಿಪುತ್ರ' ಚಿತ್ರದ ಸಕ್ಸಸ್ ನಂತರ 2018 ರಲ್ಲಿ ಅಪ್ಪು ಅಭಿನಯದಲ್ಲಿ ಮೊದಲು ಸೆಟ್ಟೇರಿದ ಚಿತ್ರವಿದು. ಹುಟ್ಟುಹಬ್ಬಕ್ಕೆ ಅದರ ಟೈಟಲ್ ಅನೌನ್ಸ್ ಆಗಿದೆ. ರಾಕ್ಲೈನ್ ಪ್ರೊಡಕ್ಷನ್ ನಿರ್ಮಾಣದ ಚಿತ್ರವಿದು ಅನ್ನೋದು ತೀವ್ರ ಕುತೂಹಲ ಹುಟ್ಟಿಸಿದೆ. ಮಧ್ಯರಾತ್ರಿಯೇ ಅದರ ಟೀಸರ್ ಲಾಂಚ್ ಮೂಲಕ ಹುಟ್ಟುಹಬ್ಬದ ಗಿಫ್ಟ್ ನೀಡಿದೆ.
ಮತ್ತೊಂದೆಡೆ ವಿಜಯ್ ಕಿರಗಂದೂರು ಹಾಗೂ ಸಂತೋಷ್ ಆನಂದ್ರಾಮ್ ಜೋಡಿ ಹೊಸ ಚಿತ್ರದ ನಾಯಕನಿಗೆ ಹುಟ್ಟು ಹಬ್ಬದ ಶುಭಾಶಯದ ಪೋಸ್ಟರ್ ಬಿಡುಗಡೆ ಮಾಡಿದೆ. ನಿರ್ಮಾಪಕರಾದ ಎಂ. ಎನ್. ಕುಮಾರ್ ಹಾಗೂ ಕೆ.ಪಿ. ಶ್ರೀಕಾಂತ್ ಅವರು ಪುನೀತ್ ರಾಜ್ಕುಮಾರ್ ಹುಟ್ಟು ಹಬ್ಬದ ಶುಭಾಶಯ ಕೋರುವ ನೆಪದಲ್ಲಿ ಅವರೊಂದಿಗೆ ಸಿನಿಮಾ ಮಾಡುವ ಸುಳಿವು ನೀಡಿದ್ದಾರೆ. ಇವೆಲ್ಲವೂ ಪುನೀತ್ ಈ ವರ್ಷದ ಹುಟ್ಟುಹಬ್ಬದ ಹೈಲೆಟ್ಸ್. ಚಿತ್ರರಂಗವೇ ಅವರ ಹುಟ್ಟು ಹಬ್ಬಕ್ಕೆ ಶುಭ ಕೋರಲಿದೆ.
Comments