'ಅಂಗುಲಿಕ' ಚಿತ್ರ ನಿರ್ದೇಶಕ, ನಿರ್ಮಾಪಕರ ವಿರುದ್ಧ ದೂರು ದಾಖಲಿಸಿದ ಪ್ರಿಯಾಮಣಿ
ಇತ್ತೀಚಿಗಷ್ಟೆ ತೆಲುಗಿನಲ್ಲಿ 'ಅಂಗುಲಿಕ' ಎಂಬ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ ಈ ಚಿತ್ರದ ಚಿತ್ರೀಕರಣ ಐದು ವರ್ಷಗಳ ಕಾಲ ನಡೆದಿದ್ದು,ಈ ಚಿತ್ರ ತಂಡದ ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧ ನಟಿ ಪ್ರಿಯಾಮಣಿ ದೂರು ದಾಖಲಿಸಿದ್ದಾರೆ. ಅಷ್ಟಕ್ಕೂ ಏನಿದು ಅಂತೀರಾ..?
ಈ ಚಿತ್ರದ ನಾನು ಈ ಸಿನಿಮಾದಲ್ಲಿ ನಟಿಸಿಲ್ಲ. ಆದ್ರೂ, ಚಿತ್ರದ ಟೀಸರ್ ನಲ್ಲಿ ನನ್ನ ಪೋಟೋ ಬಳಸಲಾಗಿದೆ ಎಂದು ಆರೋಪ ಮಾಡಿದ್ದಾರೆ. ಈ ಸಂಬಂಧ ಹೈದ್ರಾಬಾದ್ ಕಲಾವಿದರ ಸಂಘದಲ್ಲಿ ದೂರು ಕೂಡ ದಾಖಲಾಗಿದೆ. ಅಷ್ಟಕ್ಕೂ, ದೂರಿನ ಅನ್ವಯ 'ಅಂಗುಲಿಕ' ಚಿತ್ರದಲ್ಲಿ ಪ್ರಿಯಾಮಣಿ ನಟಿಸಿಲ್ಲ. ಆದ್ರೆ, ಪೋಸ್ಟರ್ ನಲ್ಲಿ ಪ್ರಿಯಾ ಫೋಟೋ ಬಳಸಲಾಗಿದೆ. ಇದು ಯಾಕೆ ಎಂಬ ಅನುಮಾನ, ಪ್ರಶ್ನೆ, ಕುತೂಹಲ ಈಗ ಎಲ್ಲರನ್ನ ಕಾಡಿದೆ. ಇದನ್ನ ಪ್ರಶ್ನಿಸಿ ಪ್ರಿಯಾ ಕಲಾವಿದರ ಸಂಘದಲ್ಲಿ ದೂರು ದಾಖಲಿಸಿದ್ದಾರೆ. ಅಂದ್ಹಾಗೆ, 'ಅಂಗುಲಿಕ' 2013ರಲ್ಲಿ ಆರಂಭವಾದ ಸಿನಿಮಾ.
ಈ ಸಿನಿಮಾ ಸೆಟ್ಟೇರಿದಾಗ ಈ ಚಿತ್ರಕ್ಕೆ ಪ್ರಿಯಾಮಣಿ ನಾಯಕಿಯಾಗಿದ್ದರು. ಅರ್ಥಾಥ್ ಈ ಸಿನಿಮಾಗೆ ಮೊದಲು ನಾಯಕಿಯಾಗಿದ್ದವರು ಪ್ರಿಯಾಮಣಿ. ಚಿತ್ರದ ಮುಹೂರ್ತದಲ್ಲಿ ಪ್ರಿಯಾಮಣಿ ಭಾಗಿಯಾಗಿದ್ದರು. ಶೂಟಿಂಗ್ ನಲ್ಲಿ ಭಾಗವಹಿಸಿದ್ದರು. ಈ ಮಧ್ಯೆ ಅದೇನ್ ಆಯ್ತೋ ಗೊತ್ತಿಲ್ಲ. ಈ ಚಿತ್ರದಿಂದ ಪ್ರಿಯಾಮಣಿ ಹೊರಬಂದರು. ನಂತರ ಪ್ರಿಯಾಮಣಿ ಜಾಗಕ್ಕೆ ಬೇರೆ ನಟಿಯನ್ನ ಕರೆತಂದು 'ಅಂಗುಲಿಕ' ಸಿನಿಮಾದವರು ಚಿತ್ರೀಕರಣ ಮುಗಿಸಿದ್ದಾರೆ. ಸ್ವತ ಪ್ರಿಯಾಮಣಿ ಅವರೇ ಈ ಚಿತ್ರದಲ್ಲಿ ನಟಿಸಿಲ್ಲ ಎನ್ನುತ್ತಿದ್ದಾರೆ. ಆದ್ರೆ, ಚಿತ್ರತಂಡ ಮಾತ್ರ ಪೋಸ್ಟರ್, ಟ್ರೈಲರ್, ಎಲ್ಲರದಲ್ಲಿಯೂ ಪ್ರಿಯಾಮಣಿ ನಾಯಕಿ ಎಂದು ಪ್ರಚಾರ ಮಾಡುತ್ತಿದೆ. ಈಗ ಕಲಾವಿದರ ಸಂಘದ ಮೊರೆಹೋಗಿರುವ ಪ್ರಿಯಾಮಣಿ ನಷ್ಟ ಪರಿಹಾರ ಕೇಳುತ್ತಿದ್ದಾರೆ.
Comments