ಅಭಿನಯ ಚಕ್ರವರ್ತಿ ಕಿಚ್ಚನ ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ..!!





ಹಿಂದೂಗಳಿಗೆ ಹೊಸ ವರ್ಷ ಹಾಗೂ ವರ್ಷದ ಮೊದಲ ಹಬ್ಬ ಯುಗಾದಿ. ಪ್ರತಿಯೊಬ್ಬರು ಸಂಭ್ರಮದಿಂದ ಆಚರಣೆ ಮಾಡುವ ಯುಗಾದಿ ಹಬ್ಬ ಸಿನಿಮಾರಂಗದಲ್ಲಿಯೂ ಕಳೆ ಕಟ್ಟಲಿದೆ. ಈಗಾಗಲೇ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗಿ ಹೋಗಿದೆ. ಆದ್ದರಿಂದ ಯಾವುದೇ ಚಿತ್ರಗಳು ಬಿಡಗಡೆ ಆಗದಿದ್ದರೂ ಸಿನಿಮಾಗಳ ಟೀಸರ್, ಚಿತ್ರ ಮಹೂರ್ತ ಇವೆಲ್ಲವೂ ಹಬ್ಬದ ಸಂದರ್ಭದಲ್ಲಿ ನಡೆಯುವ ಸಾಧ್ಯತೆಗಳು ಹೆಚ್ಚಾಗಿದೆ.
ಈ ಯುಗಾದಿ ಹಬ್ಬ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಹರುಷ ತರಲಿದೆ. ಸಾಕಷ್ಟು ದಿನಗಳಿಂದ ಕಾತುರರಾಗಿದ್ದ ಕಿಚ್ಚನ ಅಭಿಮಾನಿಗಳಿಗೆ ಹೊಸ ವರ್ಷದಂದು ವಿಶೇಷ ಉಡುಗೊರೆ ಸಿಗಲಿದೆ. ಒಬ್ಬಟ್ಟಿನ ಸಿಹಿಯ ಜೊತೆಯಲ್ಲಿ ತಮ್ಮ ನೆಚ್ಚಿನ ನಟ ಅಭಿನಯಿಸುತ್ತಿರುವ ಸಿನಿಮಾದ ಬಗ್ಗೆ ವಿಶೇಷ ಮಾಹಿತಿ ಸಿಗಲಿದೆ. ಕಿಚ್ಚನ ಅಭಿಮಾನಿಗಳಿಗೆ ಒಂದಲ್ಲ ಎರಡು ಸಿಹಿ ಸುದ್ದಿಗಳು ಹಬ್ಬದ ಸ್ಪೆಷಲ್ ಆಗಿ ಸಿಗಲಿದೆ. ಸಾಕಷ್ಟು ದಿನಗಳಿಂದ ಕಾದಿದ್ದ ಪೈಲ್ವಾನ್ ಸಿನಿಮಾದ ಮಹೂರ್ತ ಯುಗಾದಿ ಹಬ್ಬದಂದು ನಡೆಯಲಿದೆ. ಯುಗಾದಿ ಹಬ್ಬದಂದು ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಕೃಷ್ಣ ನಿರ್ದೇಶನದ ಪೈಲ್ವಾನ್ ಚಿತ್ರದ ಮಹೂರ್ತ ನಡೆಯಲಿದೆ. ಸಿನಿಮಾಗಾಗಿ ಬಾಕ್ಸಿಂಗ್ ಟ್ರೈನಿಂಗ್ ತೆಗೆದುಕೊಂಡಿರುವ ಸುದೀಪ್ ಏರ್ಪಿಲ್ ನಲ್ಲಿ ಚಿತ್ರೀಕರಣ ಶುರು ಮಾಡಲಿದ್ದಾರೆ.ಸುದೀಪ್ ಹಾಗೂ ಶಿವರಾಜ್ ಕುಮಾರ್ ಅಭಿನಯದ ದಿ ವಿಲನ್ ಸಿನಿಮಾದ ಟೀಸರ್ ಕೂಡ ಯುಗಾದಿ ಹಬ್ಬಕ್ಕೆ ಬಿಡುಗಡೆ ಮಾಡುವ ಸಾಧ್ಯತೆಗಳು ಹೆಚ್ಚಾಗಿದೆ. ಹಬ್ಬದ ವಿಶೇಷವಾಗಿ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ದಿ ವಿಲನ್ ಸಿನಿಮಾದ ಚಿತ್ರೀಕರಣ ಕೊನೆಯ ಹಂತಕ್ಕೆ ತಲುಪಿದ್ದು ಇತ್ತೀಚಿಗಷ್ಟೇ ಸಿನಿಮಾದ ಸ್ಪೆಷಲ್ ಸಾಂಗ್ ನಲ್ಲಿ ಸ್ಯಾಂಡಲ್ ವುಡ್ ನ ಖ್ಯಾತ ನಾಯಕಿಯರು ಹೆಜ್ಜೆ ಹಾಕಿದ್ದಾರೆ.
Comments