ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಡಿದ ಈ ಸಾಂಗ್ ಹಿಟ್ ಆಯ್ತು...!!
ದುನಿಯಾ ವಿಜಿ ಅಭಿನಯಿಸಿದ 'ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್' ಚಿತ್ರದ ಮುಂದುವರೆದ ಭಾಗವೇ 'ಜಾನಿ ಜಾನಿ ಯೆಸ್ ಪಪ್ಪಾ' ಸಿನಿಮಾವಾಗಿದ್ದು ಈ ಚಿತ್ರವನ್ನು ಪ್ರೀತಮ್ ಗುಬ್ಬಿ ನಿರ್ದೇಶಿಸುತ್ತಿದ್ದಾರೆ. ದುನಿಯಾ ಟಾಕೀಸ್ ಬ್ಯಾನರ್ ಅಡಿ ಸ್ವತಃ ದುನಿಯಾ ವಿಜಯ್ ಅವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಟಿ ರಚಿತಾ ರಾಮ್, ಸಾಧು ಕೋಕಿಲಾ, ರಂಗಾಯಣ ರಘು ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ.
ನಿನ್ನೆಯಷ್ಟೆ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದ ಟೈಟಲ್ ಟ್ರ್ಯಾಕ್ ಅಂಜೋದಿಲ್ಲ... ಗಿಂಜೋದಿಲ್ಲ... ಮುಖಾಮುಖಿ ಮುಕಾಬುಲ್ಲಾ, ಅಡ್ರೆಸ್ ಇಲ್ಲಾ ಫೇಸ್ಬುಕ್ ಇಲ್ಲಾ ನನ್ನಷ್ಟು ಫೇಮಸ್ ಯಾರು ಇಲ್ಲ'... ರಿಲೀಸ್ ಮಾಡಲಾಗಿದ್ದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈ ಹಾಡಿಗೆ ಧ್ವನಿಯಾಗಿದ್ದಾರೆ.
Comments