ಪವರ್ ಸ್ಟಾರ್ ಗೆ ಹೊಲಿದು ಬಂದ "ನಟ ಸಾರ್ವಭೌಮ' ..!!

ನಟ ಸಾರ್ವಭೌಮ' ಎಂದರೆ ಸಾಕು ನಮಗೆಲ್ಲ ಅಣ್ಣಾವ್ರು ನೆನಪಾಗ್ತಾರೆ. ಯಾಕೆಂದ್ರೆ ಅವರ ಅಭಿನಯವೇ ಅಂತದ್ದು, ಈ ಬಿರುದನ್ನು ಅಭಿಮಾನಿಗಳು, ಚಿತ್ರಪ್ರೇಮಿಗಳು ಕೊಟ್ಟಿದ್ದು ನಿಮಗೆ ಗೊತ್ತೇ ಇದೆ. ಆದ್ರೆ ಈಗ ಆ ಬಿರುದು ಪುನೀತ್ ರಾಜಕುಮಾರ್ ರವರಿಗೆ ಸಿಕ್ಕಿದೆ. ಏನಪ್ಪಾ ಇದು ಅಂತೀರಾ ಹೌದು ಚಿತ್ರತಂಡವೊಂದು ಪವರ್ ಸ್ಟಾರ್ ಗೆ ಕೊಟ್ಟ ಬಿರುದು.
ಹೌದು, ಪುನೀತ್ರಾಜಕುಮಾರ್ ಅವರ ಹೊಸ ಚಿತ್ರದ ಟೈಟಲ್ ಬಗ್ಗೆ ಅನೇಕರಿಗೆ ಕುತೂಹಲವಿತ್ತು. ಚಿತ್ರಕ್ಕೆ ಏನು ಟೈಟಲ್ ಇಡಬಹುದೆಂದು ಅಭಿಮಾನಿಗಳು ಕಾಯುತ್ತಿದ್ದರು. ಈಗ ಚಿತ್ರಕ್ಕೆ ಶೀರ್ಷಿಕೆ ಅಂತಿಮವಾಗಿದ್ದು, "ನಟ ಸಾರ್ವಭೌಮ' ಎಂದಿಡಲಾಗಿದೆ. ಈ ಮೂಲಕ ಮುಂದೆ ಪುನೀತ್ ಅವರನ್ನು ಅಭಿಮಾನಿಗಳು "ನಟ ಸಾರ್ವಭೌಮ' ಎಂದು ಕರೆಯಬಹುದು. ರಾಕ್ಲೈನ್ ವೆಂಕಟೇಶ ನಿರ್ಮಾಣದ ಈ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶಿಸುತ್ತಿದ್ದಾರೆ. "ರಣವಿಕ್ರಮ' ನಂತರ ಪುನೀತ್-ಪವನ್ ಜೋಡಿಯ ಎರಡನೇ ಸಿನಿಮಾವಿದು. ಈಗಾಗಲೇ "ನಟ ಸಾರ್ವಭೌಮ' ಚಿತ್ರೀಕರಣ ಕೂಡಾ ಆರಂಭವಾಗಿದೆ. ಈ ಚಿತ್ರಕ್ಕಾಗಿ ಪುನೀತ್ ಹೇರ್ಸ್ಟೈಲ್ ಕೂಡಾ ಬದಲಾಗಿದ್ದು, ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
Comments