ಮತ್ತೆ ನಟನೆಯತ್ತ ಮುಖಮಾಡಿದ ರಾಘವೇಂದ್ರ ರಾಜಕುಮಾರ್....!



ಹೌದು 'ಗಜಪತಿ ಗರ್ವಭಂಗ' ಇನ್ನು ಅನೇಕ ಚಿತ್ರಗಳ ಮೂಲಕ ಸಿನಿ ರಸಿಕರ ಮನಗೆದ್ದಿದ್ದ ಬಳಿಕ ರಾಘವೇಂದ್ರ ರಾಜಕುಮಾರ್ ರವರು ಇದೀಗ ಮತ್ತೆ ಸ್ಯಾಂಡಲ್ ವುಡ್ ಗೆ ರೀ ಎಂಟ್ರಿ ಕೊಡತ್ತಿದ್ದಾರೆ. ಅದು ಯಾವ ಸಿನಿಮಾ ? ಯಾರ ಜೊತೆ ? ಅಂತ ಗೊತ್ತಾ..!!
ಬೃಹಸ್ಪತಿ ಚಿತ್ರದ ಬಳಿಕ ರವಿಚಂದ್ರನ್ ಪುತ್ರ ಮನೋರಂಜನ್ ಚಿಲಂ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರು ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕ್ವಾಟ್ಲೆ ಖ್ಯಾತಿಯ ನಿರ್ದೇಶಕಿ ಚಂದ್ರಕಲಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಮನೋರಂಜನ್ ಅವರು ಗಾಂಜಾ ಸ್ಮಗ್ಲರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಇಬ್ಬರು ಪೊಲೀಸ್ ಅಧಿಕಾರಿಗಳ ಪಾತ್ರ ಪ್ರಮುಖವಾಗಿ ಇರಲಿದ್ದು, ಅದರಲ್ಲಿ ನಾನಾ ಪಾಟೇಕರ್ ಮತ್ತು ಕಿಶೋರ್ ನಟಿಸುವ ಸಾಧ್ಯತೆ ಇದೆ. ಈಗಾಗಲೇ ನಿರ್ದೇಶಕಿ ಚಂದ್ರಕಲಾ ಅವರು ರಾಘವೇಂದ್ರ ರಾಜಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಚಿತ್ರದ ಪಾತ್ರ ರಾಘಣ್ಣ ಅವರಿಗೆ ಇಷ್ಟವಾಗಿದೆ. ಹೀಗಾಗಿ ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
Comments