ನಟ ಧನಂಜಯ್ ಗೆ ಕನ್ನಡದ ನಟಿ ಮೇಲೆ ಕ್ರಶ್ ಆಗಿತ್ತಂತ್ತೆ....!!



ಇತ್ತೀಚಿಗೆ ಬಿಡುಗಡೆಯಾದ 'ಟಗರು' ಚಿತ್ರದಲ್ಲಿ ಡಾಲಿ ಪಾತ್ರದ ಮೂಲಕ ಎಲ್ಲರ ಮನ ಗೆದ್ದಿರುವ ನಟ ಧನಂಜಯ್ ಯಶಸ್ಸಿನ ಹಾದಿ ಹಿಡಿದಿದ್ದಾರೆ. ಡಾಲಿ ಪಾತ್ರದಿಂದ ಹುಡುಗರು ಮಾತ್ರವಲ್ಲದೆ ಮಹಿಳಾ ಅಭಿಮಾನಿಗಳು ಮೊದಲಿಗಿಂತ ದುಪ್ಪಟ್ಟಾಗಿದ್ದರೆ. ಅದರಲ್ಲೂ ವಿಲನ್ ಪಾತ್ರ ಧನಂಜಯ್ ಗೆ ಭಾರಿ ಯಶಸ್ಸು ತಂದು ಕೊಟ್ಟಿದೆ.
ಅದರಲ್ಲೂ ಸಾಕಷ್ಟು ಹುಡುಗಿಯರಿಗೆ ಇವರ ಮೇಲೆ ಕ್ರಶ್ ಆಗಿದೆ. ಆದ್ರೆ ನಟ ಧನಂಜಯ್ ಗೆ ಯಾರ ಮೇಲೆ ಕ್ರಶ್ ಆಗಿತ್ತಂತೆ ಗೊತ್ತಾ..? ಈ ವಿಷಯವನ್ನು ಸ್ವತಃ ಅವರೇ ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಕಾರ್ಯಕ್ರಮದ ಮೊದಲ ಸುತ್ತಿನಲ್ಲಿ ಶಿವಣ್ಣ ''ನೀವು ನಟಿಸಿದ 9 ಸಿನಿಮಾಗಳಲ್ಲಿ ಯಾವ ನಟಿಯ ಮೇಲಾದರೂ ಕ್ರಶ್ ಆಗಿತ್ತಾ?'' ಎಂದು ಪ್ರಶ್ನೆ ಕೇಳಿದರು.
ಆಗ ಧನಂಜಯ್ ''ಹೌದು,'ಬಾಕ್ಸರ್' ಸಿನಿಮಾದಲ್ಲಿ ನನ್ನ ಜೊತೆಗೆ ನಟಿಸಿದ್ದ ಕೃತಿಕಾ ಜಯಕುಮಾರ್ ಮೇಲೆ ಆ ಟೈಂ ನಲ್ಲಿ ಕ್ರಶ್ ಆಗಿತ್ತು.'' ಎಂದು ಉತ್ತರಿಸಿದರು. ಆ ಸಿನಿಮಾದ ಸಂದರ್ಭದಲ್ಲಿ ಕ್ರಶ್ ಆಗಿತ್ತು. ಆಮೇಲೆ ಯಾಕೋ ಅವರು ತುಂಬ ಚಿಕ್ಕ ಹುಡುಗಿ ಅನಿಸಿತು. ನಾನು ಅವರನ್ನು ಮಾತೇ ಆಡಿಸುತ್ತಿರಲಿಲ್ಲ. ಅವರು ನಿಮ್ಮ ಜೊತೆಗೆ ಕೂಡ ಸಿನಿಮಾ ಈಗ ಮಾಡುತ್ತಿದ್ದಾರೆ.'' ಎಂದು ಸಂಕೋಚದಿಂದಲೇ ಧನಂಜಯ್ ಉತ್ತರಿಸಿದರು. ಆಗ ಶಿವಣ್ಣ ''ಆಕೆ ತುಂಬ ಒಳ್ಳೆ ಹುಡುಗಿ. ಫೋನ್ ಮಾಡಿ ಇದೆಲ್ಲ ಕೇಳ್ತನಿ'' ಅಂತ ಹಾಗೆ ತಮಾಷೆ ಮಾಡಿದ್ದಾರೆ.
Comments