ಧೂಮಪಾನ ಜಾಹೀರಾತಿನ ಬೆಡಗಿ ಇದೀಗ ಸ್ಯಾಂಡಲ್ ವುಡ್ ನತ್ತ...!!



ಚಿತ್ರಮಂದಿರಗಳಲ್ಲಿ ಪ್ರಸಾರವಾಗುವ ಧೂಮಪಾನ ಜಾಹಿರಾತಿನಲ್ಲಿ ಒಂದು ಪುಟ್ಟ ಹುಡುಗಿ ತನ್ನ ತಂದೆಗೆ ಧೂಮಪಾನದ ಬಗ್ಗೆ ಅರಿವು ಮೂಡಿಸುವ ಜಾಹಿರಾತನ್ನು ಇಂದಿಗೂ ಚಿತ್ರ ಮಂದಿರಗಳಲ್ಲಿ ಪ್ರಸಾರವಾಗುತ್ತಲೇ ಇದೆ. ಅಂದು ಪುಟ್ಟ ಹುಡುಗಿಯಾಗಿ ಈ ಜಾಹಿರಾತಿನಲ್ಲಿ ನಟಿಸಿದ್ದ ಸಿಮ್ರಾನ್ ಇದೀಗ ಸ್ಯಾಂಡಲ್ ವುಡ್ ನಲ್ಲಿ ಹೀರೋಹಿನ್ ಆಗಿ ಎಂಟ್ರಿ ಕೊಡುತ್ತಿದ್ದಾರೆ.
ಪುಟ್ಟ ಬಾಲಕಿಯಾಗಿದ್ದಾಗಲೇ ಜಾಹೀರಾತು ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದ ಸಿಮ್ರಾನ್ ನಾಟೇಕರ್ ಅವರ ತಂದೆ ಮುಂಬೈಯ ಪ್ರತಿಷ್ಠಿತ ಹೋಟೆಲ್ ನಲ್ಲಿ ಮ್ಯಾನೇಜರ್. ಈಗಷ್ಟೇ ಸಿಮ್ರಾನ್ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ ಮಾಡೆಲಿಂಗ್ ನಲ್ಲೂ ತೊಡಗಿಸಿಕೊಂಡಿದ್ದಾರೆ. ಕನ್ನಡದ ಕಾಜಲ್ ಸಿನಿಮಾದ ಮೂಲಕ ನಾಯಕಿಯಾಗುತ್ತಿದ್ದಾರೆ. ಕಾಜಲ್ ಚಿತ್ರಕ್ಕೆ ಹೊಸ ಹುಡುಗಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದೆ, ಹುಡುಕಾಟ ಮಾಡುವಾಗ ಸಿಮ್ರಾನ್ ಸಿಕ್ಕರು ಎಂದು ನಿರ್ದೇಶಕ ಸುಮಂತ್ ಕ್ರಾಂತಿ ಹೇಳಿದ್ದಾರೆ.
Comments