ಅಪ್ಪು ಚಿತ್ರಕ್ಕೆ ಪ್ರಿಯಾಂಕಾ ಬದಲಿಗೆ ಬಂದ ಕನ್ನಡದ ಬೆಡಗಿ ಯಾರು ಗೊತ್ತಾ?



ಪುನೀತ್ ರಾಜಕುಮಾರ್ ಅವರ ಹೊಸ ಚಿತ್ರ ಮೊನ್ನೆಯಷ್ಟೇ ಸೆಟ್ಟೇರಿದ್ದು ಸದ್ಯ ಚಿತ್ರೀಕರಣದಲ್ಲಿದೆ. ಪವನ್ ಒಡೆಯರ್ ನಿರ್ದೇಶನದ ಈ ಚಿತ್ರಕ್ಕೆ ತೆಲುಗಿನ ಪ್ರಿಯಾಂಕಾ ಜ್ವಾಲಕರ್ ನಾಯಕಿಯಾಗಿ ಆಯ್ಕೆಯಾಗಿರುವ ಸುದ್ದಿಯನ್ನು ನೀವು ಓದಿರುತ್ತೀರಿ. ಆದರೆ, ಈಗ ಚಿತ್ರದ ನಾಯಕಿ ಬದಲಾಗಿದ್ದಾರೆ. ಪ್ರಿಯಾಂಕಾ ಜಾಗಕ್ಕೆ ರಚಿತಾ ರಾಮ್ ಬಂದಿದ್ದಾರೆ.
ಹೌದು, ಪುನೀತ್ ಅಭಿನಯದ ಹೊಸ ಚಿತ್ರಕ್ಕೆ ರಚಿತಾ ರಾಮ್ ನಾಯಕಿಯಾಗಿ ಬಂದ್ದಿದಾರೆ. ಇಷ್ಟಕ್ಕೂ ಪ್ರಿಯಾಂಕಾ ಬದಲಾಗಿದ್ದು ಯಾಕೆ ಎಂಬ ಪ್ರಶ್ನೆ ಬರುವುದು ಸಹಜ. ನಿರ್ದೇಶಕ ಪವನ್ ಒಡೆಯರ್ ಹೇಳುವಂತೆ ಡೇಟ್ಸ್ ಸಮಸ್ಯೆಯಿಂದಾಗಿ ಪ್ರಿಯಾಂಕಾ ಅವರನ್ನು ಕೈ ಬಿಡಬೇಕಾಗಿತ್ತು. ಮೂಲಗಳ ಪ್ರಕಾರ, ಈ ಚಿತ್ರಕ್ಕೆ ಲೋಕಲ್ ಹುಡುಗಿ ಇದ್ದರೆ ಚೆಂದ. ಮತ್ತು ಅವರಿಗೆ ಅರ್ಥ ಮಾಡಿಸಿ ಅಭಿನಯವನ್ನೂ ಚೆನ್ನಾಗಿ ತೆಗೆಯಬಹುದು ಎಂದು ನಿರ್ದೇಶಕ ಪವನ್ ಒಡೆಯರ್ ಮತ್ತು ಚಿತ್ರತಂಡಕ್ಕೆ ಅನಿಸಿತಂತೆ. ಅದೇ ಕಾರಣಕ್ಕೆ ಪ್ರಿಯಾಂಕಾ ಅವರನ್ನು ಬದಲಾಯಿಸಿ, ನಾಯಕಿ ಸ್ಥಾನದಲ್ಲಿ ಡಿಂಪಲ್ ಬೆಡಗಿ ರಚಿತಾ ರಾಮ್ ಅವರನ್ನು ಕೂರಿಸಲಾಗಿದೆ. ಪವನ್ ಒಡೆಯರ್ ನಿರ್ದೇಶನದ `ರಣವಿಕ್ರಮ' ಚಿತ್ರಕ್ಕೆ ರಚಿತಾ ನಾಯಕಿಯಾಗಿ ಆಯ್ಕೆಯಾಗಿದ್ದರು. ಆ ನಂತರ ಕಾರಣಾಂತರಗಳಿಂದ ಆ ಚಿತ್ರದಿಂದ ರಚಿತಾ ಹೊರಬರಬೇಕಾಯಿತು. ಆ ನಂತರ ರಚಿತಾಗೆ ಪುನೀತ್ ಅಭಿನಯದ `ಚಕ್ರವ್ಯೂಹ'ದಲ್ಲಿ ಅಭಿನಯಿಸುವುದಕ್ಕೆ ಅವಕಾಶ ಸಿಕ್ಕಿತ್ತು. ಈಗ ಪುನೀತ್ ಜೊತೆಗೆ ಅಭಿನಯಿಸುತ್ತಿರುವುದಷ್ಟೇ ಅಲ್ಲ, ಪವನ್ ಒಡೆಯರ್ ನಿರ್ದೇಶನದಲ್ಲಿ ನಟಿಸುವ ಕನಸೂ ನನಸಾಗಿದೆ.
Comments