ನಿಖಿಲ್ ಅಭಿನಯದ "ಸೀತಾರಾಮ ಕಲ್ಯಾಣ' ಚಿತ್ರದ ಭರ್ಜರಿ ಫೈಟ್

ನಿಖಿಲ್ ಅಭಿನಯದ "ಸೀತಾರಾಮ ಕಲ್ಯಾಣ' ಚಿತ್ರಕ್ಕೆ ಇತ್ತೀಚೆಗೆ ಒಂದು ಭರ್ಜರಿ ಫೈಟ್ ಚಿತ್ರೀಕರಿಸಲಾಗಿದೆ. ಇಂಟರ್ವೆಲ್ ನಂತರ ಬರುವ ಈ ಫೈಟ್ ಗೆಂದೇ ಮಿನರ್ವ ಮಿಲ್ ನಲ್ಲಿ ವಿಶೇಷ ಸೆಟ್ ಹಾಕಲಾಗಿದೆ.
ರಾಮ್-ಲಕ್ಷ್ಮಣ್ ಸಾಹಸ ಸಂಯೋಜನೆಯಲ್ಲಿ ಚಿತ್ರೀಕರಣಗೊಂಡಿರುವ ಈ ಫೈಟ್ ನ ವಿಶೇಷತೆಯೆಂದರೆ, ನಾಯಕ ನಿಖಿಲ್ ಕುಮಾರ್ ಸೂಟು-ಬೂಟು ತೊಟ್ಟು ಜೇಮ್ಸ್ ಬಾಂಡ್ ಮಾದರಿಯಲ್ಲಿ ಸುಮಾರು 80 ಜನ ಫೈಟರ್ ಗಳ ಜೊತೆಗೆ ಹೊಡೆದಾಡಿದ್ದಾರೆ. ಸುಮಾರು 10 ದಿನಗಳ ಕಾಲ ಚಿತ್ರೀಕರಣಗೊಂಡಿರುವ ಈ ಫೈಟ್ ಗೆ ನಾಲ್ಕು ಕ್ಯಾಮೆರಾಗಳನ್ನು ಬಳಸಲಾಗಿದ್ದು, ಇನ್ನು ಮುಂಬೈನಿಂದ ಹಲವು ಲೈಟ್ ಗಳನ್ನು ತರಿಸಲಾಗಿದೆ. ಅಷ್ಟೇ ಅಲ್ಲ, ಗ್ರೇಟ್ ಡೇನ್ ಎಂಬ ನಾಯಿ ಕೂಡಾ ಚಿತ್ರೀಕರಣದಲ್ಲಿ ಭಾಗವಹಿಸಿದೆ. "ಸೀತಾರಾಮ ಕಲ್ಯಾಣ' ಚಿತ್ರಕ್ಕೆ ಸುಮಾರು 120ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಈ ಪೈಕಿ 20 ದಿನಗಳ ಚಿತ್ರೀಕರಣ ಸದ್ಯಕ್ಕೆ ಮುಗಿದಿದೆ. ಇನ್ನು 100 ದಿನಗಳ ಕಾಲ ಚಿತ್ರೀಕರಣ ಬಾಕಿ ಇದ್ದು, ಈ ವರ್ಷದ ಆಗಸ್ಟ್ ನಲ್ಲಿ ಚಿತ್ರ ತೆರೆಗೆ ಬರುತ್ತದಂತೆ. ಇದು ಹೇಗೆ ಸಾಧ್ಯ ಎಂದು ಆಶ್ಚರ್ಯವಾಗಬಹುದು. ಚಿತ್ರದ ಕಾರ್ಯಕಾರಿ ನಿರ್ಮಾಪಕ ಸುನೀಲ್ ಗೌಡ ಹೇಳುವಂತೆ, "ತಿಂಗಳಿಗೆ 20 ದಿನ ಎಂದಿಟ್ಟುಕೊಂಡರೂ, ಜುಲೈಗೆ ಚಿತ್ರೀಕರಣ ಮುಕ್ತಾಯವಾಗಲಿದೆ. ಇನ್ನು ಪ್ರತಿ ತಿಂಗಳು ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯಲಿವೆ. ಆಗಸ್ಟ್ ಹೊತ್ತಿಗೆ ಚಿತ್ರದ ಎಲ್ಲಾ ಕೆಲಸ ಮುಗಿದು, ಆಗಸ್ಟ್ ನಲ್ಲಿ ಚಿತ್ರ ಬಿಡುಗಡೆ ಮಾಡಬೇಕೆಂಬುದು ತಂಡದ ಯೋಚನೆ' ಎನ್ನುತ್ತಾರೆ ಸುನೀಲ್ ಗೌಡ.
Comments