ಪೈಲ್ವಾನ್‌ಗಿರಿ ಪ್ರಾರಂಭಕ್ಕೂ ಮುಂಚೆಯೇ ಕಬಡ್ಡಿ ಅಖಾಡಕ್ಕಿಳಿದ ಹೆಬ್ಬುಲಿ



ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪೈಲ್ವಾನ್ ಆಗಲು ತಯಾರಿ ನಡೆಸುತ್ತಿರುವುದು ಗೊತ್ತಿರುವ ವಿಚಾರ. ಆದರೆ, ಪೈಲ್ವಾನ್‌ಗಿರಿ ಪ್ರಾರಂಭಕ್ಕೂ ಮುಂಚೆ ಕಬಡ್ಡಿ ಅಖಾಡಕ್ಕೆ ಇಳಿದಿದೆ ಹೆಬ್ಬುಲಿ. ಹೌದು, ಕಳೆದ ಎರಡು ದಿನಗಳಿಂದ ನಟ ಕಿಚ್ಚ ಸುದೀಪ್ ಕಬಡ್ಡಿ ಮೈದಾನದಲ್ಲಿ ಬೆವರಿಳಿಸುತ್ತಿದ್ದಾರೆ. ಇಡೀ ರಾತ್ರಿ ಕಬಡ್ಡಿ ಆಟವಾಡಿದ್ದಾರೆ ಸುದೀಪ್.
ನಟ ಕಿಚ್ಚ ಸುದೀಪ್ ಕಬಡ್ಡಿ ಆಡುತ್ತಿರುವುದು ಅಂಬಿ ಸಲುವಾಗಿ. ಹೌದು ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ 'ಅಂಬಿ ನಿಂಗೆ ವಯಸ್ಸಾಯಿತೋ' ಸೆಟ್ಟೇರಿದೆ. ಈ ಚಿತ್ರದಲ್ಲಿ ಅಂಬಿಯ ಯಂಗ್ ಏಜ್ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಈಗಾಗಲೇ ಪ್ರಾರಂಭಗೊಂಡಿದೆ. ಕಳೆದ ಎರಡು ದಿನಗಳಿಂದ ಶೂಟಿಂಗ್ ಭರ್ಜರಿಯಾಗಿಯೇ ನಡೆಯುತ್ತಿದ್ದು, ಕಿಚ್ಚ ಸುದೀಪ್ ಇದರಲ್ಲಿ ಪಾಲ್ಗೊಂಡಿದ್ದಾರೆ. ಸದ್ಯ ಕಬಡ್ಡಿಯ ಸೀನ್‌ಗಳನ್ನು ಸೆರೆ ಹಿಡಿಯಲಾಗುತ್ತಿದೆ. ಮೊನ್ನೆ ಹಾಗೂ ನಿನ್ನೆ ರಾತ್ರಿಯೆಲ್ಲ ಶೂಟಿಂಗ್ ನಡೆಸಲಾಗಿದೆ. ಕಿಚ್ಚನ ಕಬಡ್ಡಿ ಸೀನ್‌ಗಳನ್ನು ಅದ್ಭುತವಾಗಿ ಸೆರೆ ಹಿಡಿಯಲಾಗಿದೆಯಂತೆ. ಇನ್ನು 'ಅಂಬಿ ನಿಂಗೆ ವಯಸ್ಸಾಯಿತೋ' ಚಿತ್ರೀಕರಣದಲ್ಲಿ ಪಾಲ್ಗೊಂಡಿರುವುದು ಕಿಚ್ಚ ಸುದೀಪ್‌ಗೆ ಖುಷಿ ತಂದಿದೆ. ಸೆಟ್‌ಗೆ ತೆರಳಿದ ಕಿಚ್ಚನಿಗೆ ತಮ್ಮ ಮನೆಗೆ ಬಂದಷ್ಟೇ ಸಂತೋಷವಾಗಿದೆಯಂತೆ ಎಂದು ಮೂಲಗಳು ತಿಳಿಸಿವೆ.
Comments