ಅಪ್ಪು ಬರ್ತ್ ಡೇಗೆ ಕಾದಿದೆ ಸರ್‌ಪ್ರೈಸ್… ಏನು ಗೊತ್ತಾ?




ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಬರ್ತ್ ಡೇಗೆ ಈಗಾಗಲೇ ಸಿದ್ಧತೆ ನಡೆಯುತ್ತಿದೆ. ಮಾರ್ಚ್ 17 ರಂದು 43 ನೇ ವಸಂತಕ್ಕೆ ಕಾಲಿಡಲಿರುವ ರಾಜರತ್ನನಿಗೆ ಸರ್‌ಪ್ರೈಸ್‌ವೊಂದು ಕಾದಿದೆ...ಏನು ಗೊತ್ತಾ?, ಆಗದ್ರೆ ಮುಂದೆ ಓದಿ..
ಹೌದು, ನಿನ್ನೆಯಷ್ಟೇ ಪುನೀತ್ ರಾಜಕುಮಾರ್ ನಟನೆಯ ಹೊಸ ಚಿತ್ರ ಸೆಟ್ಟೇರಿದೆ. ಪವನ್ ಒಡೆಯರ್ ನಿರ್ದೇಶನದ ಈ ಚಿತ್ರದ ಶೂಟಿಂಗ್ ಭರ್ಜರಿಯಾಗಿ ಪ್ರಾರಂಭಗೊಂಡಿದೆ. ರಣವಿಕ್ರಮ ಚಿತ್ರದ ಬಳಿಕ ಪುನೀತ್-ಒಡೆಯರ್ ಮತ್ತೊಮ್ಮೆ ಜತೆಯಾಗಿರುವುದು ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಇನ್ನೂ ಹೆಸರಿಡದ ಪುನೀತ್ ಅವರ ಹೊಸ ಚಿತ್ರದ ಕುರಿತು ತಿಳಿದುಕೊಳ್ಳುವ ಬಯಕೆ ಅಪ್ಪುವಿನ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಆದರೆ, ಚಿತ್ರತಂಡ ಮಾತ್ರ ಇದುವರೆಗೂ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಯಾಕಂದ್ರೆ ಪುನೀತ್ ಹುಟ್ಟುಹಬ್ಬದಂದು ಅವರಿಗೆ ಉಡುಗೊರೆಯ ರೂಪದಲ್ಲಿ ಕೆಲವೊಂದು ಸರ್‌ಪ್ರೈಸ್ ನೀಡಲಿದೆ. ಇನ್ನು ಮಾ. 17 ರಂದು ಅಪ್ಪುವಿನ ಹೊಸ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ. ಅದರ ಜತೆಗೆ ಅಂದೇ ಈ ಚಿತ್ರದ ಟೈಟಲ್ ಕೂಡ ರಿವೀಲ್ ಆಗಬಹುದು. ಅಷ್ಟೇ ಅಲ್ಲದೇ ಈ ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎಂಬುದು ಅಂದೇ ತಿಳಿಯಬಹುದು.
Comments