ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಲೈಫ್‌ನಲ್ಲಿ ಮ್ಯಾಜಿಕ್ ಮಾಡ್ತು ಈ ಚಿತ್ರ...!!



ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಂದನವನದ ಮೇರು ನಟರುಗಳಲ್ಲಿ ಒಬ್ಬರು. ಸ್ಯಾಂಡಲ್‌ವುಡ್ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಮಿಂಚಿರುವ ಅಭಿನಯ ಚತುರ ಈ ಕನ್ನಡದ ಕಿಚ್ಚ.
ಹೌದು, ಕಿಚ್ಚ ಸುದೀಪ್ ಕನ್ನಡ ಚಿತ್ರರಂಗ ಕಂಡಿರುವ ಅಪ್ರತಿಮ ಪ್ರತಿಭೆ. ತಮ್ಮ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ ಸುದೀಪ್. ಇವರ ಚಿತ್ರಗಳು ಇಡೀ ಚಿತ್ರರಂಗದಲ್ಲಿಯೇ ಒಂದು ರೀತಿಯ ಹವಾ ಕ್ರಿಯೇಟ್ ಮಾಡುತ್ತವೆ. ಕಿಚ್ಚನ ಚಿತ್ರಗಳಿಗೆ ಅವರ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಸ್ಯಾಂಡಲ್ವುಡ್ ಟಾಲಿವುಡ್, ಕಾಲಿವುಡ್, ಬಾಲಿವುಡ್ ಹಾಗೂ ಹಾಲಿವುಡ್ ಸೇರಿದಂತೆ ಬೇರೆ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿರುವ ಕಿಚ್ಚನ ನಟನೆಗೆ ತಲೆ ಬಾಗದವರಿಲ್ಲ. ಇಂತಹ ಟ್ಯಾಲೆಂಟ್ ಇರುವ ಕಿಚ್ಚನ ಸಿನಿ ಕರಿಯರ್‌ನಲ್ಲಿ ಮ್ಯಾಜಿಕ್ ಮಾಡಿದ್ದು ಕನ್ನಡದ ಒಂದು ಚಿತ್ರ. ಅದುವೇ 'ಹುಚ್ಚ' ಸಿನಿಮಾ.
ಹೌದು, 'ಹುಚ್ಚ' ಚಿತ್ರ ತೆರೆ ಕಂಡು 17 ವರ್ಷಗಳು ಕಳೆದಿವೆ. ಇದುವರೆಗೂ ಕೂಡ ಜನರ ಮನಸ್ಸಿನಿಂದ ಮರೆಯಾಗಿಲ್ಲ ಈ ಚಿತ್ರ. ಅಂದು ಸೂಪರ್ ಹಿಟ್ ಆಗಿದ್ದ ಈ ಚಿತ್ರ ಸುದೀಪ್ ಬಾಳಲ್ಲಿ ಮ್ಯಾಜಿಕ್ ಮಾಡಿತು. ಸುದೀಪ್ ಅವರೇ ಇದನ್ನು ಒಪ್ಪಿಕೊಂಡಿದ್ದಾರೆ. ನಿನ್ನೆಯಷ್ಟೇ 'ಹುಚ್ಚ 2' ಚಿತ್ರದ ಆಡಿಯೋ ರಿಲೀಸ್ ಮಾಡಿದ್ರು ಸುದೀಪ್. ಈ ವೇಳೆ ತಮ್ಮ ಹುಚ್ಚ ಚಿತ್ರದ ಬಗ್ಗೆ ಅವರು ಮಾತನಾಡಿದ್ರು. ''ಹುಚ್ಚ ಚಿತ್ರ ಬಿಡುಗಡೆಯಾಗಿ 17 ವರ್ಷಗಳು ಕಳೆದವು ಎಂಬುದನ್ನು ನಂಬೋಕೆ ಸಾಧ್ಯವಾಗ್ತಿಲ್ಲ. ನಿನ್ನೆ ಮೊನ್ನೆ ತೆಗೆದ ಹಾಗಿದೆ. ಹುಚ್ಚ ಚಿತ್ರ ಮ್ಯಾಜಿಕ್ ಮಾಡಿತ್ತು. ಎಲ್ಲ ಚಿತ್ರಗಳು ಈ ರೀತಿ ಆಗೊಲ್ಲ. ಆ ಚಿತ್ರ ಮಾಡಿದ ಮ್ಯಾಜಿಕ್ ಕಾರಣವಾಗಿಯೇ ಸದ್ಯ ನಾ ಇಲ್ಲಿದ್ದೇನೆ'' ಎಂದಿದ್ದಾರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್.
Comments