ಬಾಲಿವುಡ್ ನ ಬಿಗ್ ಹೀರೋ ಜೊತೆ ನಟಿಸಲಿರುವ ಪ್ರಿಯಾ
ತನ್ನ ಕಣ್ ಸನ್ನೆಯಿಂದಲೇ ಪಡ್ಡೆಗಳ ಹೃದಯ ಕದ್ದಿದ್ದ ಪ್ರಿಯಾ ಇಂಟರ್'ನ್ಯಾಷನಲ್ ಕ್ರಷ್ ಆಗಿದ್ದರು. ಇದೀಗ ಪ್ರಿಯಾ ಪ್ರಕಾಶ್ ಬಗ್ಗೆ ಹೊಸ ಸುದ್ದಿಯೊಂದು ಹಬ್ಬಿದೆ.ಪ್ರಿಯಾ ಬಗ್ಗೆ ಹರಡಿರುವ ಲೇಟೆಸ್ಟ್ ರೂಮರ್ ರೋಹಿತ್ ಶೆಟ್ಟಿ, ರಣ್ವೀರ್ ಸಿಂಗ್ ಕಾಂಬಿನೇಶನ್'ನಲ್ಲಿ ಬರುತ್ತಿರುವ ಸಿಂಬಾ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.
ಈ ಚಿತ್ರದಲ್ಲಿ ರಣ್ವೀರ್ ಜೊತೆಯಾಗಿ ಪ್ರಿಯಾ ನಟಿಸುತ್ತಾರೆ ಎನ್ನಲಾಗುತ್ತಿದೆ. ಆದರೆ ಈ ಚಿತ್ರದಲ್ಲಿ ಪ್ರಿಯಾಗೆ ಅತ್ಯಂತ ದೊಡ್ಡ ಪಾತ್ರವನ್ನು ನೀಡಲಾಗುತ್ತಿಲ್ಲ ಎಂದು ಕೂಡ ಹೇಳಲಾಗಿದೆ. ಒಂದು ಕಣ್ ಸನ್ನೆಯ ಮೂಲಕ ರಾತ್ರೋ ರಾತ್ರಿ ಇಂಟರ್ನೆಟ್ ಸೆನ್ಸೇಶನ್ ಆಗಿದ್ದ ಪ್ರಿಯಾಗೆ ಸಾಕಷ್ಟು ಆಫರ್'ಗಳು ಬರುತ್ತಿದ್ದು, ಬಾಲಿವುಡ್'ನಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಇದೆ ಎನ್ನಲಾಗುತ್ತಿದೆ.
Comments