'ಕೆ.ಜಿ.ಎಫ್' ನಲ್ಲಿ ಬಳಸಿರುವ ಈ ಬೈಕ್ ಕಂಡು ದಿಲ್ ಖುಷ್ ಆದರು ರಾಕಿಂಗ್ ಸ್ಟಾರ್
ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಟರು ಬಳಸುವ ಬೈಕ್, ಕಾರುಗಳು ಪ್ರೇಕ್ಷಕರಿಗೆ ಸಖತ್ ಸ್ಪೆಷಲ್ ಆಗುತ್ತದೆ. ಆ ಬೈಕ್, ಕಾರುಗಳು ಮುಂದೆ ದೊಡ್ಡ ಟ್ರೆಂಡ್ ಸೃಷ್ಟಿ ಮಾಡುತ್ತದೆ. ಅದೇ ರೀತಿ ನಿರ್ದೇಶಕ ಪ್ರಶಾಂತ್ ನೀಲ್ ಕೂಡ 'ಕೆ ಜಿ ಎಫ್' ಸಿನಿಮಾಗಾಗಿ ಯಶ್ ಅವರಿಗಾಗಿ ಒಂದು ಬೈಕ್ ಬೇಕು ಎಂಬ ಪ್ಲಾನ್ ಮಾಡಿದ್ದರು.
ಇನ್ನು 'ಕೆ.ಜಿ.ಎಫ್' ಸಿನಿಮಾದಲ್ಲಿ ರಾಕಿ (ಯಶ್ ಪಾತ್ರದ ಹೆಸರು) ಒಂದು ಬೈಕ್ ಬಳಸಿದ್ದಾರೆ. ಈಗಾಗಲೇ ಈ ಬೈಕ್ ಸಿನಿಮಾದ ಪೋಸ್ಟರ್ ನಲ್ಲಿ ನೋಡಬಹುದಾಗಿದೆ. ಆದರೆ ಈಗ ಈ ವಿಶೇಷ ಬೈಕ್ ಎಲ್ಲರೂ ಕಣ್ಣು ಕುಕ್ಕುವಂತೆ ಮಾಡಿದೆ. 'ಕೆ ಜಿ ಎಫ್' ಸಿನಿಮಾದಲ್ಲಿ ಯಶ್ ಅವರಿಗೆ ವಿಶೇಷ ಬೈಕ್ ರೆಡಿ ಮಾಡಿರುವುದು ಭುವನ್ ಗೌಡ. ಭುವನ್ 'ಕೆ ಜಿ ಎಫ್' ಸಿನಿಮಾ ಸಿನಿಮಾಟೋಗ್ರಾಫರ್ ಕೂಡ ಆಗಿದ್ದು, ಚಿತ್ರಕ್ಕಾಗಿ ಒಂದು ಬೈಕ್ ಡಿಸೈನ್ ಮಾಡಿದ್ದಾರೆ. ಸಿಕ್ಕಾಪಟ್ಟೆ ಸೊಗಸಾಗಿರುವ ಭುವನ್ ಅವರ ಬೈಕ್ ಈಗ ದೊಡ್ಡ ಕ್ರೇಜ್ ಸೃಷ್ಟಿ ಮಾಡಿದೆ. ಬೈಕ್ ರೆಡಿ ಆದ ಬಳಿಕ ಭುವನ್ ಅದನ್ನು 'ಕೆ ಜಿ ಎಫ್' ಚಿತ್ರೀಕರಣದ ಸೆಟ್ ಗೆ ತೆಗೆದುಕೊಂಡು ಹೋದರಂತೆ. ಆಗ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಬೈಕ್ ನೋಡಿ ಆಶ್ವರ್ಯಗೊಂಡಿದ್ದಾರೆ. ಬೈಕ್ ಡಿಸೈನ್ ಅನ್ನು ಇಬ್ಬರೂ ಬಹಳ ಮೆಚ್ಚಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಕಲ್ಪನೆಯಂತೆ ಬೈಕ್ ಸಿದ್ಧಗೊಂಡಿದೆ. ಬೈಕ್ ನೋಡಿದ ತಕ್ಷಣ ಯಶ್ ಅದರ ಮೇಲೆ ಹತ್ತಿ ಸವಾರಿ ಮಾಡಿದ್ದಾರೆ.
Comments