ಬಾಲಿವುಡ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡ ಬಿಗ್ ಬಾಸ್ ಸ್ಪರ್ಧಿ ಶೃತಿ ಪ್ರಕಾಶ್



ಬಿಗ್ ಬಾಸ್ ಕನ್ನಡದಲ್ಲಿ ಸ್ಪರ್ಧಿ ಆಗಿದ್ದ ಗಾಯಕಿ ಶೃತಿ ಪ್ರಕಾಶ್ ರಿಯಾಲಿಟಿ ಶೋ ಮುಗಿಸಿ ಬಂದ ನಂತರ ನಾಯಕಿ ಆಗಬೇಕು ಎನ್ನುವ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಹೊಸಬರೆಲ್ಲರೂ ಸೇರಿ ಮಾಡುತ್ತಿರುವ ಲಂಡನ್ ನಲ್ಲಿ ಲಂಬೋದರ ಚಿತ್ರದಲ್ಲಿ ಹೀರೋಯಿನ್ ಆಗಿ ಆಕ್ಟ್ ಮಾಡಲು ಶೃತಿ ಅವರಿಗೆ ಅವಕಾಶ ಸಿಕ್ಕಿದೆ.
ಸ್ಯಾಂಡಲ್ ವುಡ್ ನಲ್ಲಿ ಮೊದಲ ಚಿತ್ರದಲ್ಲಿ ಅಭಿನಯ ಶುರು ಮಾಡುವ ಮುಂಚೆಯೇ ಬಾಲಿವುಡ್ ನಲ್ಲಿಯೂ ನಾಯಕಿಯಾಗಿ ಖಾತೆ ತೆರೆದಿದ್ದಾರೆ ನಟಿ ಹಾಗೂ ಗಾಯಕಿ ಶೃತಿ ಪ್ರಕಾಶ್. ಹಿಂದಿಯ ಸಾಕಷ್ಟು ವಿಡಿಯೋ ಆಲ್ಬಂ ನಲ್ಲಿ ಹಾಡುವುದರ ಜೊತೆಗೆ ಅಭಿನಯವನ್ನ ಮಾಡಿದ ಶೃತಿ ಮೊದಲ ಬಾರಿಗೆ ಬೆಳ್ಳೆ ತೆರೆಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಶೃತಿ ಅಭಿನಯಿಸುತ್ತಿರುವ ಬಾಲಿವುಡ್ ಸಿನಿಮಾಗೆ 'ಗುಮ್ನಾಮ್' ಎಂದು ಹೆಸರಿಟ್ಟಿದ್ದು ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಸದ್ಯ ಶೃತಿ ಪ್ರಕಾಶ್ ಅಭಿನಯದ ಕನ್ನಡ ಚಿತ್ರದ ಫೋಟೋ ಶೂಟ್ ಇತ್ತೀಚಿಗಷ್ಟೇ ನಡೆದಿದೆ. 'ಲಂಡನ್ ನಲ್ಲಿ ಲಂಬೋದರ' ಚಿತ್ರದಲ್ಲಿ ಅಭಿನಯಿಸುವುದರ ಜೊತೆಗೆ ಒಂದು ಹಾಡನ್ನು ಹಾಡುತ್ತಿದ್ದಾರೆ.
Comments