'ರಾಂಬೋ 2' ಚಿತ್ರದಲ್ಲಿ ಐದು ಬೆಡಗಿಯರಿಗೆ ನಾಯಕನಾದ ಶರಣ್



ನಟ ಶರಣ್ ಈಗ 'ರಾಂಬೋ 2' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.'ರಾಂಬೋ 2' ಸಿನಿಮಾ ಬಾರಿ ಕುತೂಹಲ ಮೂಡಿಸಿದೆ. ಅಧ್ಯಕ್ಷ ಸಿನಿಮಾದಲ್ಲಿ ತಮ್ಮ ಕಾಮಿಡಿ ಮೂಲಕ ಎಲ್ಲರನ್ನು ರಂಜಿಸಿದ್ದ ಶರಣ್ ಹಾಗೂ ಚಿಕ್ಕಣ್ಣ ಕಾಂಬಿನೇಷನಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ 'ಮುಗುಳುನಗೆ' ಬೀರಿದ್ದ ಹುಡುಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ ಆದರೆ ಇದೀಗ ಸಿನಿಮಾದ ಒಂದು ಹಾಡಿನಲ್ಲಿ ಇನ್ನೂ ಐದು ನಾಯಕಿಯರು ಶರಣ್ ಜೊತೆಗೆ ಸ್ಟೆಪ್ ಹಾಕಲಿದ್ದಾರೆ.
ಸಾಮಾನ್ಯವಾಗಿ ಒಂದು ಸಿನಿಮಾದ ವಿಶೇಷ ಹಾಡುಗಳಿಗೆ ಈ ರೀತಿಯ ಪ್ರಯೋಗ ಮಾಡಲಾಗುತ್ತದೆ. ಈಗ 'ರಾಂಬೋ 2' ಸಿನಿಮಾದಲ್ಲಿ ಆ ರೀತಿಯ ಒಂದು ಪ್ರಯತ್ನ ನಡೆದಿದೆ. ಸಿನಿಮಾದ ಒಂದು ಸ್ಪೆಷಲ್ ಹಾಡಿನಲ್ಲಿ ಕಾಮಿಡಿ ಕಿಂಗ್ ಶರಣ್ ಜೊತೆಗೆ ಐದು ನಾಯಕಿಯರು ಕಾಣಿಸಿಕೊಳ್ಳಲಿದ್ದಾರೆ. ಒಂದು ವಿಶೇಷ ಅಂದರೆ ಇವರೆಲ್ಲ ಶರಣ್ ಅವರ ಹಿಂದಿನ ಸಿನಿಮಾದಲ್ಲಿ ನಟಿಸಿರುವ ನಾಯಕಿಯರೇ ಆಗಿದ್ದಾರೆ. ನಟಿ ಶೃತಿ ಹರಿಹರನ್ (ಮಾರುತಿ 800), ಮಯೂರಿ (ನಟರಾಜ ಸರ್ವಿಸ್), ಸಂಚಿತಾ ಪಡುಕೋಣೆ (ಸತ್ಯ ಹರಿಶ್ಚಂದ್ರ), ಶುಭಾಪೂಂಜಾ (ಮಾರುತಿ 800), ಭಾವನ ರಾವ್ (ಸತ್ಯ ಹರಿಶ್ಚಂದ್ರ) ಈ ಐದು ನಾಯಕಿಯರು ಮತ್ತೆ ಶರಣ್ ಜೊತೆಗೆ 'ರಾಂಬೋ 2' ಹಾಡಿನಲ್ಲಿ ಹೆಜ್ಜೆ ಹಾಕಲಿದ್ದಾರೆ. ಅಂದಹಾಗೆ, 'ರಾಂಬೋ 2' ಸಿನಿಮಾವನ್ನು 'ದಿಲ್ ವಾಲ' ಖ್ಯಾತಿಯ ಅನಿಲ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ನಾಗೇಂದ್ರ ನಿರ್ಮಾಣ ಚಿತ್ರಕ್ಕಿದೆ. ಹಂಡ್ರೆಡ್ ಪರ್ಸೆಂಟ್ ಕಾಮಿಡಿ ಇರುವ ಈ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ ಎನ್ನಲಾಗಿದೆ.
Comments