'ಟಗರು' ಸಿನಿಮಾ ವೀಕ್ಷಿಸಲಿರುವ ರಾಕಿಂಗ್ ಸ್ಟಾರ್ ..!
ಶಿವರಾಜ್ ಕುಮಾರ್ ಅವರ 'ಟಗರು' ಸಿನಿಮಾದ ಈಗಾಗಲೇ ಗೆದ್ದಿದೆ. ಇದರಿಂದ ಚಿತ್ರತಂಡ ಕೂಡ ಸಂತೋಷದಲ್ಲಿ ಇದೆ. ಪ್ರೇಕ್ಷಕರು, ವಿಮರ್ಶಕರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.
ಸಿನಿಮಾಗೆ ಬಂದಿರುವ ಪ್ರತಿಕ್ರಿಯೆಯಿಂದ ಶಿವಣ್ಣ ಅಂಡ್ ಟೀಂ ಗೆ ಹೊಸ ಜೋಶ್ ಬಂದಿದೆ. ಎಲ್ಲ ಕಡೆ ಸಿನಿಮಾಗೆ ದೊಡ್ಡ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ ಯಶ್ ಕೂಡ ಸಿನಿಮಾ ನೋಡುವ ಕಾತುರದಲ್ಲಿ ಇದ್ದಾರೆ. ಯಶ್ 'ಟಗರು' ಸಿನಿಮಾವನ್ನು ನಾಳೆ ನೋಡಲಿದ್ದಾರೆ. ನಾಳೆ (ಶನಿವಾರ) ಸಂಜೆ 4 ಗಂಟೆಗೆ ಯಶ್ ನೋಡಲಿದ್ದಾರೆ. ಬೆಂಗಳೂರಿನ ಓರಯನ್ ಮಾಲ್ ನಲ್ಲಿ ಯಶ್ ಚಿತ್ರವನ್ನು ವೀಕ್ಷಿಸಲಿದ್ದಾರೆ. ಇನ್ನು 'ಟಗರು' ಸಿನಿಮಾ ಈಗ ವಿದೇಶಕ್ಕೆ ಕೂಡ ಹಾರಿದೆ. ಮಾರ್ಚ್ 8 ಅಂದ್ರೆ ಇಂದು 'ಯು.ಎಸ್.ಎ'ನಲ್ಲಿ 'ಟಗರು' ತೆರೆಗೆ ಅಪ್ಪಳಿಸಲಿದೆ. ಶಿಕಾಗೋ, ಫಿಲಡೆಲ್ಫಿಯ, ಅಟ್ಲಾಂಟ ಸೇರಿದಂತೆ 25ಕ್ಕೂ ಹೆಚ್ಚು ಕಡೆ 'ಟಗರು' ಬಿಡುಗಡೆ ಆಗಲಿದೆ. ಟಗರು' ಸಿನಿಮಾ ಈಗಾಗಲೇ ಹಿಟ್ ಆಗಿದೆ.
Comments