ಯಶ್ ಪೊಲಿಟಿಷಿಯನ್ ಆದ್ರೆ ಹೀಗಿರುತ್ತೆ ಗೊತ್ತ ..?
ರಾಕಿಂಗ್ ಸ್ಟಾರ್ ಈಗಾಗಲೇ ಅನೇಕ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮತ್ತೊಂದೆಡೆ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಹರಡಿತ್ತು.ಆದರೆ ಕೆಲವರಿಗೆ ಯಶ್ ಪೊಲಿಟಿಷಿಯನ್ ಆದರೆ ಹೇಗಿರುತ್ತೆ. ಅನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಆಗಾಗ ಮೂಡುತ್ತಲೇ ಇತ್ತು.
ಇಂತದೊಂದು ಪ್ರಶ್ನೆಗೆ ರಾಧಿಕಾ ಅವರಿಂದ ಉತ್ತರ ಸಿಕ್ಕಿದೆ. ಇತ್ತೀಚಿಗಷ್ಟೆ ರಾಧಿಕಾ ಪಂಡಿತ್ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಖಾಸಗಿ ಸುದ್ದಿ ವಾಹಿನಿಯಲ್ಲಿ ಹಿಂಗಾದರೆ ಹೆಂಗೆ ಎನ್ನುವ ಕಾನ್ಸೆಪ್ಟ್ ನಲ್ಲಿ ರಾಧಿಕಾ ಅವರಿಗೆ ಕೆಲ ಪ್ರಶ್ನೆಗಳನ್ನ ಕೇಳಲಾಗಿತ್ತು. ಯಶ್ ಪೊಲಿಟಿಷಿಯನ್ ಆದರೆ ಹೇಗಿರುತ್ತೆ? ಎನ್ನುವ ಪ್ರಶ್ನೆಗೆ ರಾಧಿಕಾ ತುಂಬಾ ಚೆನ್ನಾಗಿ ಉತ್ತರ ನೀಡಿದ್ದಾರೆ. ರಾಜಕೀಯಕ್ಕೆ ರಾಕಿಂಗ್ ಸ್ಟಾರ್ ಪ್ರವೇಶ ಮಾಡಿದರೆ ಕರ್ನಾಟಕ ಇನ್ನು ಚೆನ್ನಾಗಿರುತ್ತದೆ. ಉತ್ತಮ ಕೆಲಸಗಳು ನಡೆಯುತ್ತದೆ ಎಂದಿದ್ದಾರೆ. ಯಶೋಮಾರ್ಗದಿಂದ ಆಗಿರುವ ಕೆಲಸಗಳನ್ನ ನೋಡಿದರೆ ಯಶ್ ರಾಜಕೀಯಕ್ಕೆ ಬಂದರೆ ಇಂತಹ ಸಾಕಷ್ಟು ಒಳ್ಳೆ ಕೆಲಸಗಳು ಆಗುತ್ತೆ ಎನ್ನುವುದನ್ನ ಅಭಿಮಾನಿಗಳು ಮಾತ್ರವಲ್ಲದೆ ಸಾಮಾನ್ಯ ಜನರು ನಂಬಿದ್ದಾರೆ.
Comments