ಪ್ರಧಾನಿ ಮೋದಿ ಗೆ ಆಕ್ಷನ್ ಕಟ್ ಹೇಳಲಿರುವ ರೂಪ ಆಯ್ಯರ್
`ನಮೋ' ಎಂಬ ಹೆಸರಿನಲ್ಲಿ ಸಿನಿಮಾ ಮಾಡಲು ರೂಪಾ ಅಯ್ಯರ್ ಮುಂದಾಗಿದ್ದಾರೆ. ಈಗಾಗಲೇ ಸಿನಿಮಾಕ್ಕೆ ಸಂಬಂಧಪಟ್ಟಂತೆ ಅವ ಸ್ಕ್ರಿಪ್ಟ್ ಅಂತಿಮವಾಗಿದ್ದು, ಸದ್ಯದಲ್ಲೇ ಸಿನಿಮಾ ಶುರುವಾಗಲಿದೆಯಂತೆ.
ಈ ಚಿತ್ರಕ್ಕಾಗಿ ನರೇಂದ್ರ ಮೋದಿಯವರ ಜೀವನದ ಕುರಿತಾದ ಅಂಶಗಳನ್ನು ಸಂಶೋಧಿಸಿ ಸ್ಕ್ರಿಪ್ಟ್ ಸಿದ್ಧಪಡಿಸಿದ್ದಾರೆ. ಈ ಚಿತ್ರ ಕೇವಲ ಕನ್ನಡವಷ್ಟೇ ಅಲ್ಲದೇ, ಹಿಂದಿಯಲ್ಲೂ ಮೂಡಿಬರುತ್ತಿದೆ ಎನ್ನುವುದು ವಿಶೇಷ. ಒಬ್ಬ ನಾಯಕರಾಗಿ ನರೇಂದ್ರ ಮೋದಿಯವರು ಯುವ ಜನತೆಗೆ ಪ್ರೇರಣೆಯಾದ ರೀತಿ ನನಗೆ ಬಹಳ ಇಷ್ಟವಾಯಿತು. ಹಾಗಾಗಿ,`ನಮೋ' ಸಿನಿಮಾ ಮಾಡಲು ನಿರ್ಧರಿಸಿದೆ. ಈ ಚಿತ್ರಕ್ಕೊಂದು ಆಧ್ಯಾತ್ಮಿಕ ಹಿನ್ನೆಲೆಯೂ ಇರಲಿದೆ' ಅಂತ ಮಾಧ್ಯಮಗಳಿಗೆ ಅವರು ತಿಳಿಸಿದ್ದಾರೆ. ಸುಮಾರು ಒಂದು ವರ್ಷದ ಹಿಂದೆಯೇ ಸ್ಕ್ರಿಪ್ಟ್ ಮಾಡಿಟ್ಟುಕೊಂಡಿದ್ದ ಅವರು, ಈ ವರ್ಷ ಸಿನಿಮಾ ಪ್ರಾರಂಭಿಸಲಿದ್ದಾರೆ. ಅಮೆರಿಕದಲ್ಲಿರುವ ಅವರ ಸ್ನೇಹಿತೆಯೊಬ್ಬರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ ಅಂತ ಹೇಳಿದ್ದಾರೆ.
Comments