ಉಪವಾಸ ಕುಳಿತ ಅಭಿಮಾನಿಗೆ ಕಿಚ್ಚ ನಿಂದ ನೀತಿ ಪಾಠ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನ ಭೇಟಿ ಮಾಡಬೇಕು. ಅದಕ್ಕಾಗಿ ಉಪವಾಸ ಮಾಡುತ್ತೇನೆ ಎಂದು ನಿರ್ಧಾರ ಮಾಡಿ ಕಿಚ್ಚನ ಅಭಿಮಾನಿಯೊಬ್ಬರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ನಕಪುರ ಬಳಿ ಇರುವ ಸಾತನೂರಿನ ನಾಗಸೊಂಡೆ ಗ್ರಾಮದಲ್ಲಿ ವಾಸವಾಗಿರುವ ಕಿಚ್ಚ ಶಿವು ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಸಾಕಷ್ಟು ಅಭಿಮಾನಿಗಳು ಆತನ ವಿರುದ್ಧ ಅಸಮಾಧಾನ ವ್ಯೆಕ್ತಪಡಿಸಿದ್ದಾರೆ. ನೀವು ಉಪವಾಸ ಮಾಡುವುದರಿಂದ ಸುದೀಪ್ ಅವರಿಗೆ ತೊಂದರೆ ಉಂಟಾಗುತ್ತದೆ ಅಲ್ಲದೆ ಅವರಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಕಿಚ್ಚನ ಅಭಿಮಾನಿಗಳು ಬೇಸರ ವ್ಯೆಕ್ತ ಪಡಿಸಿದ್ದಾರೆ. ಈ ವಿಷಯ ತಿಳಿದ ಬಳಿಕ ಅಭಿನಯಚಕ್ರವರ್ತಿ ಟ್ವಿಟ್ ಮಾಡಿದ್ದಾರೆ. ಹುಚ್ಚು ಅಭಿಮಾನಿಗೆ ನೀತಿ ಪಾಠ ಹೇಳಿದ ಕಿಚ್ಚ ಉಪವಾಸ ಮಾಡುತ್ತಿರುವ ಬಗ್ಗೆ ತಿಳಿದ ಸುದೀಪ್ ಅಭಿಮಾನಿಗೆ ತಿಳಿ ಹೇಳುವ ಕೆಲಸ ಮಾಡಿದ್ದಾರೆ. 'ನೀವು ಚೆನ್ನಾಗಿದ್ದರೆ ನನಗೆ ಖುಷಿ ಉಪವಾಸ ಮಾಡಿ ನೋವು ನೀಡಬೇಡಿ' ಎಂದು ಟ್ವಿಟ್ ಮಾಡಿದ್ದಾರೆ. ಉಪವಾಸ ಮಾಡುತ್ತಿರುವ ಬಗ್ಗೆ ತಿಳಿದ ಸುದೀಪ್ ಅಭಿಮಾನಿಗೆ ತಿಳಿ ಹೇಳುವ ಕೆಲಸ ಮಾಡಿದ್ದಾರೆ. 'ನೀವು ಚೆನ್ನಾಗಿದ್ದರೆ ನನಗೆ ಖುಷಿ ಉಪವಾಸ ಮಾಡಿ ನೋವು ನೀಡಬೇಡಿ' ಎಂದು ಟ್ವಿಟ್ ಮಾಡಿದ್ದಾರೆ.ಅಭಿಮಾನಿಯ ಬಗ್ಗೆ ಕಾಳಜಿ ವಹಿಸಿ ಸುದೀಪ್ ಟ್ವಿಟ್ ಮಾಡಿರುವುದನ್ನ ನೋಡಿರುವ ಅಭಿಮಾನಿಗಳು ಇನ್ನಾದರೂ ಉಪವಾಸ ಬಿಟ್ಟು ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಕಿಚ್ಚ ಶಿವು ಅವರಿಗೆ ತಿಳಿಸಿದ್ದಾರೆ.
Comments