ದೊಡ್ಮನೆ ಮೊಮ್ಮಗನಿಗೆ ಬಾಕ್ಸ್ ಆಫೀಸ್ ಸುಲ್ತಾನನಿಂದ ಶ್ರೀ ರಕ್ಷೆ ..!!

ದೊಡ್ಮನೆ ಕುಟುಂಬದ ಕುಡಿಗಳ ಕಲಾಸೇವೆಗೆ ಅಭಿಮಾನಿದೇವರುಗಳುಸದಾ ಅವರಿಗೆ ಪ್ರೀತಿ ವಿಶ್ವಾಸ ತುಂಬಿ ಅವರನ್ನು ಅಭಿನಂದಿಸಿದ್ದಾರೆ. ಇದರ ಮಧ್ಯೆ ಅಣ್ಣಾವ್ರ ಕುಟುಂಬದಿಂದ ಮತ್ತೊಬ್ಬ ನಟ ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಿರುವುದು ದೊಡ್ಡ ಸುದ್ದಿಯಾಗಿತ್ತು. ಹೌದು, ಪಾರ್ವತಮ್ಮ ರಾಜ್ ಕುಮಾರ್ ಅವರ ಸಹೋದರ ಎಸ್ ಎ ಶ್ರೀನಿವಾಸ್ ಅವರ ಪುತ್ರ ಸೂರಜ್ ಕುಮಾರ್ ಹೀರೋ ಆಗಿ ಚಿತ್ರರಂಗಕ್ಕೆ ಬರುತ್ತಿದ್ದಾರೆ.
ಕಮರ್ಷಿಯಲ್ ಹೀರೋಗೆ ಹೇಳಿ ಮಾಡಿಸಿದ ಫಿಟ್ ನೆಸ್, ಮಾಸ್ ಹೀರೋಗೆ ಬೇಕಿರುವ ಹೈಟು, ನೋಡೋದಕ್ಕೂ ಸ್ಮಾರ್ಟ್, ಈ ಎಲ್ಲಾ ಕ್ವಾಲಿಟಿ ಇರುವ ಸೂರಜ್ ಬೆನ್ನಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿಂತಿರುವುದು ವಿಶೇಷ. ಹಾಗಿದ್ರೆ, ದರ್ಶನ್ ಯಾವ ರೀತಿ ಸೂರಜ್ ಗೆ ಬೆಂಬಲವಾಗಿದ್ದಾರೆ ಇದನ್ನು ಸೂರಜ್ ಸ್ವತಹ ಒಂದು ಟಿವಿ ಸಂದರ್ಶನದಲ್ಲಿ ಈ ವಿಷಯದ ಬಗ್ಗೆ ಬಾಯ್ಬಿಟ್ಟಿದ್ದಾರೆ. 'ನನಗೆ ಬುದ್ದಿ ಬಂದಗಾನಿಂದಲೂ ದರ್ಶನ್ ಅವರನ್ನ ನೋಡುಕೊಂಡೇ ಬೆಳೆದೆ. ಮೊದಲಿನಿಂದಲೂ ನನಗೆ ಅವರು ಪರಿಚಯ. ನಾನು ಮೈಸೂರು, ಅವರು ಮೈಸೂರು.'ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ದರ್ಶನ್ ಅವರ ಸಲಹೆ ಇದ್ದೇ ಇರುತ್ತೆ. ಅವರ ಜೊತೆ ಎರಡು ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಅದು ನನ್ನ ಪುಣ್ಯ. ಅವರನ್ನ ನೋಡಿ ಕಲಿತಿದ್ದು ಹೆಚ್ಚಿದೆ.ಎಂದು ಡಿ ಬಾಸ್ ಬಗ್ಗೆ ಹಾಡಿ ಹೊಗಳಿದ್ದಾರೆ.
Comments